

ಸುರಪುರ: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ಅಭಿವೃದ್ಧಿಗೆ ಷೇರುದಾರರ ಸಹಕಾರ ಬಹಳ ಮುಖ್ಯವಾಗಿದೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಗುರುವಾರ ಕರೆದಿದ್ದ ಪಿಕಾರ್ಡ್ ಬ್ಯಾಂಕ್‌ನ ೬೩ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ರೈತರ ಏಳಿಗೆಗಾಗಿ ಈ ಬ್ಯಾಂಕ್‌ನ್ನು ಮಾಜಿ ಶಾಸಕ ರಾಜಾ ಕುಮಾರ ನಾಯಕ ಅವರು ಸ್ಥಾಪಿಸಿದ್ದರು ಎಂದು ಹೇಳಿದರು.
ಪ್ರಸ್ತುತ ಬ್ಯಾಂಕ್‌ನ ಬಂಡವಾಳ ೯೨.೧೯ ಲಕ್ಷಗಳಾಗಿದೆ. ರೈತರು ಬ್ಯಾಂಕ್‌ನಿAದ ಪಡೆದ ಸಾಲದಿಂದ ಸದೃಢರಾಗಬೇಕು. ಸಾಲ ವಸೂಲಾತಿಯಲ್ಲೂ ಬ್ಯಾಂಕ್ ಸಾಕಷ್ಟು ಪ್ರಗತಿ ಸಾಧಿಸಿದೆ. ರೈತರು ತಾವು ಪಡೆದುಕೊಂಡಿರುವ ಸಾಲ ಸಮಯಕ್ಕೆ ಸರಿಯಾಗಿ ಮರುಪಾವತಿಸಬೇಕು. ಹುಣಸಗಿಯಲ್ಲಿ ಬ್ಯಾಂಕ್‌ನ ಶಾಖೆ ಮತ್ತು ಸುರಪುರದಲ್ಲಿ ಬ್ಯಾಂಕ್‌ನ ಕಟ್ಟಡ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಅಧ್ಯಕ್ಷ ಬಸನಗೌಡ ಪಾಟೀಲ್ ದೇವಾಪುರ ಮಾತನಾಡಿ, ಬ್ಯಾಂಕ್ ಸದಸ್ಯರ ಸಂಖ್ಯೆ ೯೯೨೬ ಇದ್ದು ಇದರಲ್ಲಿ ೯೨.೧೯ ಲಕ್ಷ ಷೇರು ಬಂಡವಾಳವಿದೆ. ಈ ವರ್ಷ ಮಾರ್ಚ್ವರೆಗೆ ಶೇ.೮೬.೬೦ ವಸೂಲಾತಿ ಸಾಧಿಸಲಾಗಿದೆ. ೨೦೨೩-೨೪ನೇ ಸಾಲಿಗೆ ನಮ್ಮ ಬ್ಯಾಂಕ್ ಟ್ರಾö್ಯಕ್ಟರ್ ಹಾಗೂ ವಿವಿಧ ಯೋಜನೆಗಳಲ್ಲಿ ೧೬೨.೮೬ ಲಕ್ಷ ಆರ್ಥಿಕ ಹಂಚಿಕೆ ಮಾಡಲಾಗಿದೆ ಎಂದರು.
ವ್ಯವಸ್ಥಾಪಕ ರಾಜಶೇಖರ ಬ್ಯಾಂಕ್‌ನ ಲೆಕ್ಕಪತ್ರ ಮಂಡಿಸಿದರು. ಬ್ಯಾಂಕ್‌ನ ನಿರ್ದೇಶಕ ರಾಯಪ್ಪಗೌಡ ದರ್ಶನಾಪುರ, ಉಪಾಧ್ಯಕ್ಷ ನಿಂಗಣ್ಣ ಕೆಂಗೂರಿ ಕವಡಿಮಟ್ಟಿ, ನಿರ್ದೇಶಕರಾದ ವಾಮನರಾವ್ ದೇಶಪಾಂಡೆ, ರಾಮಚಂದ್ರ ಪೂಜಾರಿ, ಧರೆಪ್ಪ ಮೇಟಿ, ಪ್ರಕಾಶ ಸಜ್ಜನ್, ಬಸನಗೌಡ ಪಾಟೀಲ್ ಕೋಳಿಹಾಳ, ರಾಜಾ ಸುಭಾಶಚಂದ್ರ ನಾಯಕ, ಬಸಣ್ಣ ಕಮತಗಿ, ಶೆಟ್ಟಿ ನಾಯಕಿ, ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಕೆಪಿಸಿಸಿ ಸದಸ್ಯ ಗುಂಡಪ್ಪ ಸೊಲ್ಲಾಪುರ, ರೈತರಾದ ನಂದನಗೌಡ ಪಾಟೀಲ್, ಬಸವರಾಜ ಬಾಗಲಿ, ಶರಣಗೌಡ ಪಾಟೀಲ್, ಶರಣಗೌಡ ಬಿರಾದಾರ್, ಎಂಡಿ ಯೂಸೂಫ್, ವಿಜಯಕುಮಾರ, ಶಿವಪ್ಪ ಬಳಗೊಂಡ, ಬಸಯ್ಯ ಗಣಾಚಾರಿ, ಮಲ್ಲಣ್ಣ ಬಳಗೊಂಡ, ರಾಚನಗೌಡ ಮುಷ್ಠಳ್ಳಿ, ಮೊಹ್ಮದ್ ಹುಸೇನ್, ಕಿರಿಯ ಕ್ಷೇತ್ರಾಧಿಕಾರಿ ಸಂಜೀವಕುಮಾರ, ತೋಟೇಂದ್ರ ಪಾಟೀಲ್, ಶರಣಯ್ಯಸ್ವಾಮಿ ಸೇರಿ ಇತರರಿದ್ದರು. ಕ್ಷೇತ್ರಾಧಿಕಾರಿ ನಿಂಗಪ್ಪ ಎಚ್. ವಂದಿಸಿದರು. ಬಸವರಾಜ ಪಾರಾಪುರ ನಿರೂಪಿಸಿದರು.