ಶ್ವಾನಪಡೆಯ ‘ಟೈಸನ್‌’ ಅಕಾಲಿಕ ಸಾವು

WhatsApp Image 2024-07-22 at 4.46.47 PM
Published on

ಬಳ್ಳಾರಿ : ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿಎಆರ್ ಶ್ವಾನದಳದಲ್ಲಿದ್ದ ‘ಟೈಸನ್’ (7) ಹೆಸರಿನ ಗಂಡು ನಾಯಿ ಭಾನುವಾರ ಅಕಾಲಿಕ ಮರಣಕ್ಕೆ ತುತ್ತಾಗಿದ್ದು, ಇಲಾಖಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. 
ಲ್ಯಾಬ್ರಡಾರ್‌ ಪ್ರಭೇದದ ಟೈಸನ್‌ ಕಲುಷಿತ ಆಹಾರ ಸೇವೆನೆಯಿಂದ ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಎಸ್ಪಿ ಡಾ. ಶೋಭಾರಾಣಿ ವಿ.ಜೆ ಎಎಸ್ಪಿಗಳಾದ ರವಿಕುಮಾರ್‌, ನವೀನ್‌ ಕುಮಾರ್‌, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್‌ಪಿ ತಿಪ್ಪೇಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net