

ಬಸವಕಲ್ಯಾಣ: ಅಧ್ಯಾತ್ಮದ ಉನ್ನತ ಶಿಖರಕ್ಕೇರಿದ ಅಲ್ಲಮ ಪ್ರಭು ದೇವರು ಜಗತ್ತಿನ ಶ್ರೇಷ್ಠ ದಾರ್ಶನಿಕರು. ಅನುಭವ ಮಂಟಪದ ಅಧ್ಯಕ್ಷರಾಗಿ ಸಕಲ ಶರಣರಿಗೆ ಮಾರ್ಗದರ್ಶನ ನೀಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಹುಲಸೂರನ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ನುಡಿದರು.
ಅಲ್ಲಮ ಪ್ರಭುದೇವರ ಜಯಂತಿ ನಿಮಿತ್ತ ಅಲ್ಲಮಪ್ರಭುದೇವರ ಗದ್ದುಗೆ ಮಠದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವಜ್ರಕಾಯದ ಗೋರಕ್ಷನ ಜತೆ ಸಂವಾದ ಮಾಡಿ ಗೋರಕ್ಷನಾಥರನ್ನು ಇಷ್ಟಲಿಂಗ ದೀಕ್ಷೆ ನೀಡಿ ಶಿಷ್ಯರನ್ನಾಗಿಸಿದ ಕೀರ್ತಿ ಅಲ್ಲಮಪ್ರಭುಗಳಿಗೆ ಸಲ್ಲುತ್ತದೆ ಎಂದರು.
ಸಾಯಗಾಂವದ ಶ್ರೀ ಶಿವಾನಂದ ದೇವರು ಪ್ರಾರ್ಥನೆ ನಡೆಸಿಕೊಟ್ಟರು. ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಹಾಗೂ ವಿಶ್ವಸ್ಥ ಸಮಿತಿಯ ಉಪಾಧ್ಯಕ್ಷ ಜಿ.ಎಸ್.ಭೂರಾಳೆ ಉಪಸ್ಥಿತರಿದ್ದರು. ಡಾ.ಭೀಮಾಶಂಕರ ಬಿರಾದಾರ ಸ್ವಾಗತಿಸಿದರು. ಡಾ.ರುದ್ರಮಣಿ ಮಠಪತಿ ನಿರೂಪಣೆ ಮಾಡಿ ವಂದಿಸಿದರು.
ಭವ್ಯ ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ನಗರದ ಶ್ರೀ ಬಸವೇಶ್ವರ ದೇವಸ್ಥಾನದಿಂದ ಅಲಂಕೃತ ವಾಹನದಲ್ಲಿ ಶ್ರೀ ಅಲ್ಲಮಪ್ರಭು ದೇವರ ಭಾವಚಿತ್ರದೊಂದಿಗೆ ಪಲ್ಲಕ್ಕಿ ಮೆರವಣಿಗೆ ಕಾಳಿಗಲ್ಲಿ, ಪರುಷಕಟ್ಟೆ, ಗಾಂಧಿ ವೃತ್ತ, ಬಸವೇಶ್ವರ ವೃತ್ತದ ಮೂಲಕ ಅಲ್ಲಮಪ್ರಭು ದೇವರ ಗದ್ದುಗೆ ಮಠಕ್ಕೆ ತಲುಪಿತು. ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ, ಉಪಾಧ್ಯಾಕ್ಷ ಮಲ್ಲಿಕಾರ್ಜುನ ಚಿರಡೆ, ಕೋಶಾಧ್ಯಕ್ಷ ರಾಜಕುಮಾರ ಹೊಳಕುಂದೆ, ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ಸಹಕಾರ್ಯದರ್ಶಿ ವಿವೇಕಾನಂದ ಹೊದಲೂರೆ, ನಿರ್ದೇಶಕರಾದ ಮಲ್ಲಯ್ಯ ಸ್ವಾಮಿ, ಅನೀಲಕುಮಾರ ರಗಟೆ, ರೇವಣಪ್ಪ ರಾಯವಾಡೆ, ಸುಭಾಷ ಹೊಳಕುಂದೆ, ಕಾಶಪ್ಪ ಸಕ್ಕರಭಾವಿ ಜಗನ್ನಾಥ ಖೂಬಾ, ವಿಜಯಲಕ್ಷ್ಮೀ ಗಡ್ಡೆ, ವಿಶ್ವಸ್ಥ ಸಮಿತಿ ಅಧ್ಯಕ್ಷ ಶಶಿಕಾಂತ ದುರ್ಗೆ, ಉಪಾಧ್ಯಕ್ಷ ಡಾ.ಜಿ.ಎಸ್.ಭುರಳೆ, ಕಾರ್ಯದರ್ಶಿ ನಾಗಯ್ಯ ಸ್ವಾಮಿ, ವಿಶ್ವಸ್ಥರಾದ ಸೋಮಶೇಖರಯ್ಯ ವಸ್ತçದ, ಮಲ್ಲಿನಾಥ ಮಂಠಾಳೆ ಇತರರಿದ್ದರು.