ಶ್ರೇಷ್ಠ ಗುಣಗಳನ್ನು ಅಳವಡಿಸಿಕೊಳ್ಳಿ

10 KAMPLI 01
Published on

ಕಂಪ್ಲಿ: ಭಗವಾನ್ ಮಹಾವೀರರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಎಸ್.ಶಿವರಾಜ ಹೇಳಿದರು.

ತಹಸಿಲ್ ಕಚೇರಿ ಸಭಾಂಗಣದಲ್ಲಿ ಮಹಾವೀರ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು. ಮನುಷ್ಯರೆಲ್ಲರೂ ಒಂದೇ ಆಗಿದ್ದು, ಎಲ್ಲರೂ ಬಾಳಬೇಕು ಮತ್ತು ಬಾಳಲು ಸಹಕರಿಸಬೇಕು ಎನ್ನುವ ತತ್ವ ಅನುಕರಣೀಯವಾಗಿದೆ. ಪ್ರೀತಿ, ಕರುಣೆ ಮತ್ತು ಗೌರವದೊಂದಿಗೆ ಜೀವಿಸಬೇಕು. ಅಹಿಂಸೆ, ಶಾಂತಿ, ಸತ್ಯ ಮೊದಲಾದ ಶ್ರೇಷ್ಠ ಗುಣಗಳನ್ನು ಪಾಲಿಸಬೇಕೆಂದರು.

ಗ್ರೇಡ್-2 ತಹಸೀಲ್ದಾರ್ ಎಂ.ಆರ್.ಷಣ್ಮುಖ, ಸಿಬ್ಬಂದಿ ಮಾಲತೇಶ ದೇಶಪಾಂಡೆ, ಮೌನೇಶ, ಸುರೇಶ್, ಜೈನ ಸಮುದಾಯದ ಪ್ರಮುಖರಾದ ಶಾಂತಿಲಾಲ್ ಬಾಲಾರ್, ಶಾಂತಿಲಾಲ್ ಸಿಂಘ್ವಿ, ಗೌತಮ್‌ಚಂದ್ ಬಾಗ್ರೇಚಾ, ನವೀನ್ ಬಾಗ್ರೇಚಾ, ರಾಕೇಶ್ ಬಾಗ್ರೇಚಾ, ಚೇತನ್ ಹುಂಡಿಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net