ಶ್ರೇಯಾ ಖಾಲ್ಯಗೆ ನಾಲ್ಕು ಚಿನ್ನದ ಪದಕ

15
Published on

ಮೈಸೂರು: ನಗರದ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದಲ್ಲಿ (ಸಿಎಫ್‌ಟಿಆರ್‌ಐ) ಶುಕ್ರವಾರ ಎಂಎಸ್ಸಿ (ಫುಡ್ ಟೆಕ್ನಾಲಜಿ) ವಿದ್ಯಾರ್ಥಿಗಳಿಗೆ ಪದಕ, ಪ್ರಶಸ್ತಿ ಪತ್ರ ಮತ್ತು ವಿದ್ಯಾರ್ಥಿವೇತನ ವಿತರಣೆ ಮಾಡಲಾಯಿತು.

ಶ್ರೇಯಾ ಖಾಲ್ಯ ಅವರು ನಾಲ್ಕು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು. ದಿವ್ಯಜ್ಯೋತಿ ಎರಡು ಚಿನ್ನದ ಪದಕ, ಭವನ್ ಚೌಘ್ ಒಂದು ಚಿನ್ನದ ಪದಕ ಪಡೆದರು. ಯಶಮಿತ್ ಗ್ರೋವರ್ ಬೆಳ್ಳಿ ಪದಕ ಮತ್ತು ಪಿ.ವಿ.ಸೂರ್ಯಪ್ರಕಾಶ್‌ರಾವ್ ಸ್ಮರಣಾರ್ಥ ಪದಕವನ್ನು ಪಡೆದರು.

ಸಿನಿ ಮಿಶ್ರಾ ರಂಗಣ್ಣ ಶೆಟ್ಟಿ ಮತ್ತು ಸ್ಮರಣಾರ್ಥ ಪ್ರಶಸ್ತಿಯನ್ನು, ಆರ್.ಲಕ್ಷ್ಮೀ ವಿಜಯನ್ ಮತ್ತು ದಿವ್ಯಾ ಅಗರ್‌ವಾಲ್ ಅವರು ಪಿವಿ ಸೂರ್ಯ ಪ್ರಕಾಶ್‌ರಾವ್ ಸ್ಮರಣಾರ್ಥ ಪದಕ ಪಡೆದುಕೊಂಡರು.


ಕಾಜಲ್ ಸಹು, ಸಚಿನ್ ಅಲಗೂರ್, ಜಿ.ಚೇತನ್, ರಿಯಾ ಸೈನಿ, ಕೃಷ್ಣಕುಮಾರ್ ಉಪಾಧ್ಯಾಯ, ವಾಲ್ಸ್ ಪೆರ್ಲ್, ಜೆ.ಭರತ್, ಎಸ್.ಎನ್.ವಸುದೇವ್, ಎಸ್.ವಿ.ಚಂದನ್, ಎ.ಆರ್.ಶಿವಕುಮಾರ್, ಎ.ಪ್ರದೀಪ್, ಸೋಮನ್‌ರಾಹುಲ್ ಅಜಿತ್, ಎಂ.ಖಲಂದರ್, ಡಿ.ವೆಂಕಟಲಕ್ಷ್ಮೀ, ಶಾಲಿನಿ ಸಿನ್ಹಾ, ರಾಮ್‌ಪ್ರಸಾದ್ ನಾಯಕ್ ವಿವಿಧ ಶಿಷ್ಯವೇತನವನ್ನು ಪಡೆದರು.

ಸಿಎಫ್‌ಟಿಆರ್‌ಐ ನಿವೃತ್ತ ನಿರ್ದೇಶಕ, ವಿಜ್ಞಾನಿ ಪದ್ಮಶ್ರೀ ಡಾ.ವಿ.ಪ್ರಕಾಶ್, ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್, ಎಚ್‌ಆರ್ ವಿಭಾಗದ ಡಾ.ಪ್ರದೀಪ್‌ಸಿಂಗ್ ನೇಗಿ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net