ಶ್ರೀಸಿದ್ಧೇಶ್ವರಸ್ವಾಮೀಜಿಗೆ ನುಡಿ ನಮನ

04raju3
Published on

ಚಾಮರಾಜನಗರ: ವಿಜಯಪುರ ಜ್ಞಾನಯೋಗಶ್ರಮದ ಶ್ರೀಸಿದ್ಧೇಶ್ವರ ಸ್ವಾಮಿಗಳ ಸರಳತೆ, ಮತ್ತು ಅವರಲ್ಲಿದ್ದ ಜ್ಞಾನ ಭಂಡಾರ, ಆಲೋಚನ ಶಕ್ತಿ ಯುವ ಪೀಳಿಗೆಗೆ ಸ್ಫೂರ್ತಿಯಾಗಿದೆ ಎಂದು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ ತಿಳಿಸಿದರು.

ನಗರದ ಮಹಾಮನೆಯಲ್ಲಿ ಸೋಮವಾರ ಸಂಜೆ ಶ್ರೀಸಿದ್ಧೇಶ್ವರ ಸ್ವಾಮಿಗಳ ನಿಧನದ ಗೌರವಾರ್ಥ ಆಯೋಜಿಸಿದ್ದ ನುಡಿ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಾನ್ ಸಂತರಾಗಿದ್ದ ಸಿದ್ಧೇಶ್ವರ ಸ್ವಾಮಿಗಳು ಬಹಳ ಸರಳವಾಗಿ ಜೀವನ ನಡೆಸಿ, ಸಮಾಜಕ್ಕೆ ಪಾಠವಾಗಿದ್ದಾರೆ. ಆಪಾರವಾದ ಜ್ಞಾನ ಸಂಪತ್ತು ಹೊಂದಿದ್ದ ಶ್ರೀಗಳು ಯಾವುದೇ ಆಡಂಬರವಿಲ್ಲದೇ ಸೂಕ್ಷತೆಯಿಂದ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಪ್ರವಚನ ಮಾಡುವ ಮೂಲಕ ಲಕ್ಷಾಂತರ ಮಂದಿಯ ಜೀವನವನ್ನು ಪರಿವರ್ತನೆ ಮಾಡಿದ್ದಾರೆ ಎಂದರು.

ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಯೋಗ ಪ್ರಕಾಶ್ ಮಾತನಾಡಿ, ಬಸವಣ್ಣ, ಸಿದ್ದಗಂಗಾ ಶ್ರೀಗಳಿಗೆ ನಮ್ಮ ಮನ, ಮನೆಗಳಲ್ಲಿ ನೀಡಿರುವ ಜಾಗವನ್ನು ಶ್ರೀಸಿದ್ಧೇಶ್ವರ ಸ್ವಾಮಿಗಳಿಗೂ ಕಲ್ಪಿಸಬೇಕಾಗಿದೆ. ಅವರ ಭಾವಚಿತ್ರವನ್ನು ಮಹಾಮನೆಯಲ್ಲಿ ಹಾಕಬೇಕೆಂದು ಸಲಹೆ ನೀಡಿದರು.

ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಕೆ.ರವಿಕುಮಾರ್, ಸಂಘದ ಕಾರ್ಯದರ್ಶಿ ಅರ್ಕಪ್ಪ, ಉಪಾಧ್ಯಕ್ಷರಾದ ಮಹದೇವಸ್ವಾಮಿ ಐಟಿಐ, ಮಾದಲಾಂಬಿಕೆ, ಸಹ ಕಾರ್ಯದರ್ಶಿ ನಿರ್ಮಲಾ, ಸಂಚಾಲಕ ಬಸವರಾಜಪ್ಪ, ಸಂಗಮ ಗೃಹ ನಿರ್ಮಾಣ ಸಂಘದ ಗೌರವ ಕಾರ್ಯದರ್ಶಿ ಬಿ. ಮಹದೇವಸ್ವಾಮಿ, ಜಾಗೃತಿ ಸಮಿತಿ ನಂದೀಶ್, ಬಸವೇಶ್ವರ ಪತ್ತಿನ ಸಂಘದ ಮಾಜಿ ಅಧ್ಯಕ್ಷ ಶಿವಕುಮಾರ್, ರೋಟರಿ ಅಧ್ಯಕ್ಷ ಮಹದೇವಸ್ವಾಮಿ ಮತ್ತು ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net