ಶ್ರೀಶ್ರದ್ಧಾ ಸಹಕಾರಿಯ ೧೩ನೇ ಶಾಖೆ ಉದ್ಘಾಟನೆ

12npn2
Published on

ಚಿಕ್ಕೋಡಿ: ಸಂಘದ ಸಂಸ್ಥಾಪಕ ಅಧ್ಯಕ್ಷ ಚಂದ್ರಕಾಂತ ಕೋಠಿವಾಲೆ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಶ್ರದ್ಧಾ ಸಹಕಾರಿ ಸಂಘದ ಮೇಲೆ ವಿಶ್ವಾಸವಿಟ್ಟ ಗ್ರಾಮಸ್ಥರ ಒತ್ತಾಯದ ಮೇರೆಗೆ ಶಾಖೆ ಪ್ರಾರಂಭಿಸಲಾಗಿದೆ. ಶ್ರದ್ಧಾ ಸಹಕಾರಿಯು ಪಾರದರ್ಶಕತೆಯ ವ್ಯವಹಾರ ಮತ್ತು ಆಡಳಿತ ಮಂಡಳಿಯ ಸುವ್ಯವಸ್ಥಿತ ಆಡಳಿತದಿಂದ ಸಂಘವು ಉನ್ನತಕ್ಕೆ ಬೆಳೆಯುತ್ತಿದೆ ಎಂದು ಶಾಖೆಯ ಉಪಾಧ್ಯಕ್ಷ ಪ್ರವೀಣ ಪಾಟೀಲ ಹೇಳಿದರು.

ತಾಲೂಕಿನ ಖಡಕಲಾಟ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶ್ರೀಶ್ರದ್ಧಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ೧೩ನೇ ಶಾಖೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿಡಸೋಸಿಯ ದುರದುಂಡೇಶ್ವರ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮತ್ತು ಕುಮಾರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ ಉದ್ಘಾಟಿಸಿದರು.

ಸಂಚಾಲಕ ಪಪ್ಪು ಪಾಟೀಲ, ಸಿಇಒ ದಿನಕರ ಪವಾರ ಮಾತನಾಡಿದರು. ಶಾಖೆಯ ಸಂಚಾಲಕ ಸಂದೀಪ ಪಾಟೀಲ ದಂಪತಿಯಿಂದ ಪೂಜೆ ಹಾಗೂ ಸ್ವಾಮೀಜಿ ಪಾದಪೂಜೆ ಜರುಗಿತು.

ಸಂಘದ ಸಂಸ್ಥಾಪಕ ಅಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಉಪಾಧ್ಯಕ್ಷ ಶಿವಮೂರ್ತಿ ಸ್ವಾಮಿ, ಸಂಚಾಲಕ ಸುರೇಶ ಕೋಠಿವಾಲೆ, ಶಶಿಕಾಂತ ಕೋಠಿವಾಲೆ, ರಾವಸಾಹೇಬ ಪಾಟೀಲ, ರಾಜಶೇಖರ ಹಿರೇಕೊಡಿ, ನರಸಗೊಂಡಾ ಪಾಟೀಲ, ಸಂಜಯ ಶಿಂತ್ರೆ, ಶಾಖೆಯ ಅಧ್ಯಕ್ಷ ರಾಜು ಜೈನಾಪುರೆ, ಸಂಚಾಲಕ ಬೀರಾ ಗಾವಡೆ, ಶೇಖರ ಸ್ವಾಮಿ, ಬಾಬಾಸಾಹೇಬ ಶಿರಗಾವೆ, ವಿರಾಜ ಸಂಕಾಜೆ, ದಿಲೀಪ ಶಿಂತ್ರೆ, ಮಹಾಂತೇಶ ಅಂಕಲಿ, ಮಹಾದೇವ ಪಾಟೀಲ, ಶರದ ಖೋತ್, ಸಿದ್ಧಗೌಡ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net