

ಬೀದರ್: ಬೆಮಳಖೇಡ ಹಿರೇಮಠದ ಶ್ರೀ ಡಾ. ರಾಜಶೇಖರ ಶಿವಾಚಾರ್ಯರು ಅಧಿಕ ಮಾಸ ನಿಮಿತ್ತ ದ್ವಾದಶ ಜ್ಯೋತಿಲರ್ಿಂಗ ಮಹಾ ಕ್ಷೇತ್ರವಾದ ಶ್ರೀಶೈಲದ ಅಕ್ಕಮಹಾದೇವಿ ಚೈತನ್ಯ ಕೇಂದ್ರದಲ್ಲಿ ತಪೋನುಷ್ಠಾನ ಆರಂಭಿಸಿದ್ದಾರೆ. ಚೈತನ್ಯ ಕೇಂದ್ರದ ಮಹಾತಪಸ್ವಿ ಪೂಜ್ಯಶ್ರೀ ಕರುಣಾದೇವಿ ಮಾತಾ ಅವರ ಆಜ್ಞಾನುಸಾರ ಶ್ರೀಗಳು ಅನುಷ್ಠಾನ ಕೈಗೊಂಡಿದ್ದಾರೆ. ಹಿಂದೂ ಪಂಚಾಂಗದಂತೆ ಮೂರು ವರ್ಷಕ್ಕೊಮ್ಮೆ ಬರುವ ಅಧಿಕ ಮಾಸದಲ್ಲಿ ಅನುಷ್ಠಾನ, ಜಪತಪ, ಗುರು ಸೇವೆ, ದೇವದರ್ಶನ, ದಾನ, ಧಮರ್ಾದಿ ಕಾರ್ಯಕ್ರಮಗಳು ಕೈಗೊಳ್ಳುವುದು ಶ್ರೇಷ್ಠ ಪುಣ್ಯದ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಗಳು ಕರೊನಾ ಮಹಾಮಾರಿ ವಿನಾಶವಾಗಲಿ, ವಿಶ್ವದ ಕಲ್ಯಾಣವಾಗಲಿ ಎಂಬ ಪ್ರಾರ್ಥನೆಯೊಂದಿಗೆ ತಪೋನುಷ್ಠಾನ ನಡೆಸಿದ್ದಾರೆ. ಬರುವ ವಿಜಯದಶಮಿ ದಿನ ಇದು ಮಂಗಲಗೊಳ್ಳಲಿದೆ.