

ಶ್ರೀಶೈಲಂ: ಶ್ರೀಶೈಲ ಪೀಠದ 1008 ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಪ್ಪಣೆ ಮೇರೆಗೆ ಪೀಠದ ಸೇವಾ ಸಮಿತಿ ವತಿಯಿಂದ ಬಡವರು, ಭಿಕ್ಷುಕರು, ಸಾಧು-ಸಂತರು, ನಿರ್ಗತಿಕರು, ಕೂಲಿ-ಕಾರ್ಮಿಕರಿಗೆ ಸೋಮವಾರ ಶ್ರೀಶೈಲಂನಲ್ಲಿ ಉಪಾಹಾರ, ಊಟ ವಿತರಿಸಲಾಯಿತು.
ಕರೊನಾ ಹಿನ್ನೆಲೆಯಲ್ಲಿ ಬಡವರಿಗೆ, ಭಿಕ್ಷುಕರಿಗೆ ಊಟಕ್ಕೆ ತೊಂದರೆಯಾಗಿರುವುದನ್ನು ಅರಿತ ಜಗದ್ಗುರುಗಳು, ಅನ್ನದಾನ ಮಾಡುವಂತೆ ಪೀಠದ ಸೇವಾ ಸಮಿತಿಗೆ ತಿಳಿಸಿದ್ದರು. ಹೀಗಾಗಿ 500ಕ್ಕೂ ಹೆಚ್ಚು ಜನರಿಗೆ ಅನ್ನದಾನ ಮಾಡಲಾಗಿದೆ ಎಂದು ಶ್ರೀಶೈಲ ಮಠದ ಆಡಳಿತಾಧಿಕಾರಿ ಎಂ.ಎಸ್. ಬಸವರಾಜಸ್ವಾಮಿ ತಿಳಿಸಿದ್ದಾರೆ.
ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಭದ್ರಯ್ಯ ಸ್ವಾಮಿ, ಶ್ರೀಶೈಲ ಪೀಠದ ಮುಖ್ಯ ವ್ಯವಸ್ಥಾಪಕರಾದ ಎಂ.ಬಿ. ಮಂಜುನಾಥ ಸ್ವಾಮಿ, ಸಂಪರ್ಕಾಧಿಕಾರಿ ಕೆ.ಶ್ರೀನಿವಾಸರಾವ್ ಇತರರಿದ್ದರು.