ಶ್ರೀಶನೇಶ್ವರ ಸ್ವಾಮಿ ಪೂಜಾ ಮಹೋತ್ಸವ

Published on

ಚಾಮರಾಜನಗರ: ಕಡೆ ಶ್ರಾವಣ ಶನಿವಾರದ ಅಂಗವಾಗಿ ತಾಲೂಕಿನ ಚಂದಕವಾಡಿ ಗ್ರಾಮ ಪಂಚಾಯಿತಿ ಹಿಂಭಾಗವಿರುವ ಶ್ರೀಶನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಕಾರ್ಯಕ್ರಮಗಳು ಜರುಗಿದವು.

ದೇವರಿಗೆ ಸಪ್ತ ಅಭಿಷೇಕಗಳು ನಡೆದು ನಂತರ ಬೆಳ್ಳಿ ಕವಚ ಧಾರಣೆ ಹಾಗೂ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಮಹಾ ಮಂಗಳಾರತಿ ನಂತರ ಶನೇಶ್ವರ ಸ್ವಾಮಿಯವರ ಕಥಾ ಕಾಲಕ್ಷೇಪ, ನಂತರ ರಥೋತ್ಸವ ನಡೆದು ಸ್ವಾಮಿ ಅವರ ಆಹ್ವಾನದ ನಂತರ ಭಕ್ತಾದಿಗಳಿಗೆ ಅನ್ನದಾನವನ್ನು ಏರ್ಪಡಿಸಲಾಗಿತ್ತು. ದೇವಸ್ಥಾನದ ವ್ಯವಸ್ಥಾಪಕ ರಂಗರಾಮು ಹಾಗೂ ಭಕ್ತ ಮಂಡಳಿಯ ಸದಸ್ಯರು ಮತ್ತು ಭಕ್ತಾದಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net