

ಮೈಸೂರು: ಜೆಎಸ್‌ಎಸ್ ಮಹಾವಿದ್ಯಾಪೀಠ, ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆ, ಶ್ರೀವ್ಯಾಸರಾಜಮಠದಿಂದ ಆ.1ರಂದು ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಕೃಷ್ಣಮೂರ್ತಿಪುರಂನಲ್ಲಿರುವ ವ್ಯಾಸರಾಜ ಮಠದಲ್ಲಿ ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30ರ ವರೆಗೆ ಶಿಬಿರ ಆಯೋಜಿಸಲಾಗಿದ್ದು, ಡಯಾಬಿಟಿಕ್ ಹರ್ನಿಯಾ, ಮೂತ್ರಕೋಶದ ಕಲ್ಲು, ಸೋಂಕು, ಪಿತ್ತಕೊಶದ ಬಾವು, ಕುರ, ಕಲ್ಲೊತ್ತು, ಕೋಧ ಇತರ ತೊಂದರೆಗಳು, ಅಸ್ಥಿಭಗ್ನ, ಬೆನ್ನುಮೂಳೆ ಚಿಕಿತ್ಸೆ, ಮೂಲವ್ಯಾಧಿ, ಭಗಂದರ, ಪಿಶರ್, ವಾಸಿಯಾಗದ ಗಾಯಗಳು, ಚರ್ಮಸಮಸ್ಯೆ, ಥೈರಾಯಿಡ್, ಸಕ್ಕರೆ ಕಾಯಿಲೆಯಿಂದಾಗುವ ಗಾಯಗಳಿಗೆ ಚಿಕಿತ್ಸೆ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ತಜ್ಞವೈದ್ಯರು ಸಲಹೆ, ಚಿಕಿತ್ಸೆ ನೀಡಲಿದ್ದಾರೆ. ಮಾಹಿತಿಗೆ ಮೊಬೈಲ್ 7795124260 ಅನ್ನು ಸಂಪರ್ಕಿಸಬಹುವುದು ಎಂದು ಶಿಬಿರ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.