ಶ್ರೀವೇದವರ್ಧನ ತೀರ್ಥರಿಗೆ ಹರಿಸೇವಾ ಕೌಸ್ತುಭ ಬಿರುದು

Published on

ಚಾಮರಾಜನಗರ: ನಗರಕ್ಕೆ ಆಗಮಿಸಿದ್ದ ಉಡುಪಿ ಶಿರೂರು ಮಠದ ಹಾಗೂ ಮುಂದಿನ ಪರ್ಯಾಯ ಪೂಜೆಗೆ ಕೂರುವ ಶ್ರೀವೇದವರ್ಧನ ತೀರ್ಥರಿಗೆ ನಗರದ ಜನಾರ್ಧನ ಪ್ರತಿಷ್ಠಾನದ ವತಿಯಿಂದ ಹರಿಸೇವಾ ಕೌಸ್ತುಭ ಬಿರುದು ನೀಡಿ ಗೌರವಿಸಲಾಯಿತು.

ಹರಳುಕೋಟೆ ಜನಾರ್ಧನಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ ಪೂಜ್ಯರು ಜನಾರ್ಧನಸ್ವಾಮಿಗೆ ವಿಶೇಷಪೂಜೆ ಸಲ್ಲಿಸಿ ದೇವಸ್ಥಾನದ ಬಗ್ಗೆ ಅನಂತಪ್ರಸಾದ್ ಅವರಿಂದ ಮಾಹಿತಿ ಪಡೆದುಕೊಂಡರು. ನಂತರ ಜನಾರ್ಧನ ಪ್ರತಿಷ್ಠಾನದ ವತಿಯಿಂದ ಹರಿಸೇವಾ ಕೌಸ್ತುಭ ಬಿರುದು ನೀಡಿ ಫಲತಾಂಬೂಲ ನೀಡಿ ಗೌರವಿಸಲಾಯಿತು.

ಗೌರವ ಸ್ವೀಕರಿಸಿದ ವೇದವರ್ಧನ ತೀರ್ಥರು ಭಗವಂತ ಎಲ್ಲ ಜನರಿಗೆ ಸನ್ಮಂಗಳವನ್ನುಂಟು ಮಾಡಲಿ ಎಂದು ಆಶೀರ್ವದಿಸಿದರು. ಬರಹಗಾರ ಲಕ್ಷ್ಮೀನರಸಿಂಹ ಮಾತನಾಡಿ, ಪುರಾತನ ಪ್ರಸಿದ್ಧ ಜನಾರ್ಧನಸ್ವಾಮಿ ದೇವಸ್ಥಾನಕ್ಕೆ ಮಾಧ್ವ ಪರಂಪರೆಯ ಪೂಜ್ಯ ಗುರುಗಳು ಭೇಟಿ ಕೊಟ್ಟು ಜನಾರ್ಧನನ ಸೇವೆ ಮಾಡಿದ್ದಾರೆ. ಅದೇ ಪರಂಪರೆಯ ಶಿರೂರು ಮಠದ ಶ್ರೀವೇದವರ್ಧನ ತೀರ್ಥರು ಆಗಮಿಸಿದ್ದಾರೆ ಎಂದರು. ಪೂಜ್ಯರ ಮುಂದಿನ ಶ್ರೀಕೃಷ್ಣನ ಪರ್ಯಾಯ ಪೂಜೆ ಯಶಸ್ವಿಯಾಗಿ ನಡೆಯಲಿ ಎಂದರು. ಜನಾರ್ಧನ ಪ್ರತಿಷ್ಠಾನದ ಅನಂತಪ್ರಸಾದ್, ರುದ್ರಭೂಮಿ ಸತೀಶ್, ನವೀನ್, ಜನಾರ್ಧನ, ವಾದಿರಾಜ, ಶ್ರೀಶಭಟ್ಟರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net