ಶ್ರೀವಿಶ್ವಾರಾಧ್ಯರ ರಥೋತ್ಸವ ಫೆ.28ಕ್ಕೆ

abbetumkur photos copy
Published on

ಯಾದಗಿರಿ: ತಾಲೂಕಿನ ಅಬ್ಬೆತುಮಕೂರಿನ ಸಿದ್ಧಿ ಪುರುಷ ಶ್ರೀವಿಶ್ವಾರಾಧ್ಯರ ರಥೋತ್ಸವ ಫೆ.28 ರಂದು ಸಂಜೆ 6.30ಕ್ಕೆ ಸಡಗರದಿಂದ ನಡೆಯಲಿದೆ ಎಂದು ಮಠದ ವಕ್ತಾರ ಡಾ.ಸುಭಾಶ್ಚಂದ್ರ ಕೌಲಗಿ ತಿಳಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ವಿಶ್ವಾರಾಧ್ಯರ ಕತೃ ಗದ್ದುಗೆಗೆ ಗೋರಟಾ ಸಂಗೀತ ಬಳಗದವರಿಂದ ವಿಶೇಷ ರುದ್ರಾಭಿಷೇಕ ಜರುಗುವುದು. ನಂತರ ಹನ್ನೊಂದು ದಿವಸಗಳಿಂದ ಸಾಗಿಬಂದ ವಿಶ್ವಾರಾಧ್ಯರ ಪುರಾಣ. ಪಲ್ಲಕ್ಕಿ ಉತ್ಸವ ಮೆರವಣಿಗೆ ಮಂಗಲವಾದ್ಯಗಳೊಂದಿಗೆ ಪುರವಂತರ ಸೇವೆಸಮೇತ ಗ್ರಾಮದಲ್ಲಿ ನಡೆಯುವದು ಎಂದು ಹೇಳಿದ್ದಾರೆ.

ತರುವಾಯ ಶ್ರೀಗಳು ತೇರಿಗೆ ವಿಶೇಷ ಪೂಜೆಯನ್ನು ನೆರವೇರಿಸಿ, ಕಳಸವನ್ನು ಆರೋಹಣ ಮಾಡುವರು. ಸಂಜೆ 6.30ಕ್ಕೆ ರಥೋತ್ಸವ ಜರುಗುವುದು. ನಂತರ ರಾತ್ರಿ 8ಕ್ಕೆ ಮಾನವ ಧರ್ಮ ಸಮಾವೇಶ ಜರುಗುವುದು. ಕಡಗಂಚಿಯ ವೀರಭದ್ರ ಸ್ವಾಮೀಜಿ, ಬಾಲೆ ಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ಪಂಚಾಕ್ಷರಿ ಸ್ವಾಮೀಜಿ, ದೋರನಹಳ್ಳಿಯ ಶಿವಲಿಂಗ ರಾಜೇಂದ್ರ ಸ್ವಾಮೀಜಿ, ಶಹಾಪೂರದ ಗುರುಪಾದ ಸ್ವಾಮೀಜಿ, ಮುರುಘೇಂದ್ರ ಸ್ವಾಮೀಜಿ, ಸೇಡಂನ ಸದಾಶಿವ

ಸ್ವಾಮೀಜಿ, ಶಹಾಪೂರ ಕಾಳಹಸ್ತೇಂದ್ರ ಸ್ವಾಮೀಜಿ, ಹುಕ್ಕೇರಿಯ ಚಂದ್ರಶೇಖರ ಸ್ವಾಮೀಜಿ, ದೇವಾಪೂರದ ಸ್ವಾಮೀಜಿ ಸೇರಿದಂತೆ ಮುಂತಾದವರು ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net