ಶ್ರೀವರಸಿದ್ಧಿ ವಿನಾಯಕನಿಗೆ ವಿಶೇಷ ಪೂಜೆ : 50ನೇ ವರ್ಷದ ಸಂಭ್ರಮ ಹಿನ್ನೆಲೆ

12kglphoto-1
Published on

ಚಾಮರಾಜನಗರ : ಕೊಳ್ಳೇಗಾಲ ಪಟ್ಟಣದ ಶ್ರೀವರಸಿದ್ಧಿ ವಿನಾಯಕಸ್ವಾಮಿ ದೇವಸ್ಥಾನದ 50ನೇ ವರ್ಷದ ಸಂಭ್ರಮದ ಅಂಗವಾಗಿ ಶುಕ್ರವಾರ ಗಣಪನಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.


ಮೂರ್ತಿಗೆ ವಿಶೇಷವಾಗಿ ಗಂಧದ ಅಲಂಕಾರ ಮಾಡಲಾಗಿತ್ತು. ಮುಂಜಾನೆಯಿಂದ ಪುಣ್ಯಾಹ, ಅಭಿಷೇಕ, ಕಳಸ ಪೂಜೆ, ಕಳಸ ಪ್ರತಿಷ್ಠಾಪನೆ, ಗಣಪತಿ ಹೋಮ, ಮಹಾಮಂಗಳಾರತಿ ಪೂಜಾ ಕೈಂಕರ್ಯ ಸಲ್ಲಿಸಲಾಯಿತು. ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.


ಹೋಮ-ಯಾಗದ ಸೇವಾರ್ಥದಾರರಾದ ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಹಾಗೂ ಅವರ ಪತ್ನಿ ಮಂಜುಳಾ ಪೂರ್ಣಾವತಿ ನಡೆಸಿ, ಮಹಾಮಂಗಳಾರತಿ ಸ್ವೀಕರಿಸಿದರು. ದೇವಾಲಯದ ಪೂಜಾ ಕೈಕಂರ್ಯಗಳನ್ನು ಪ್ರಧಾನ ಅರ್ಚಕ ಟಿ.ವಿ.ಎಸ್.ರಾಘವನ್, ಶ್ರೀನಿ, ಸಾರಂಗಪಾಣಿ, ಪ್ರಸಾದ್, ನಂದಕುಮಾರ್, ರಮೇಶ್, ಗೌತಮ್ ನೆರವೇರಿಸಿ ಕೊಟ್ಟರು. ಮೇಲ್ವಿಚಾರಕರಾದ ಸಿದ್ದರಾಮಯ್ಯ, ಸುರೇಶ್, ವರಸಿದ್ಧಿ ವಿನಾಯಕ ಟ್ರಸ್ಟ್ ಅಧ್ಯಕ್ಷ ಕೃಷ್ಣಪ್ಪ, ಶಂಕರಪ್ಪ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net