ಶ್ರೀರಾಮನ ಶಾಪ ಬಿಜೆಪಿಗೆ ತಟ್ಟಲಿದೆ

d335bb05-844f-4f5f-81d1-c6920aa916e6--02
Published on

ಚಿತ್ರದುರ್ಗ:ಶ್ರೀರಾಮನ ಶಾಪ ಬಿಜೆಪಿಯವರಿಗೆ ತಟ್ಟಲಿದೆ ಎಂದು ಶಿಕ್ಷಣ ಸಚಿವ ಎಸ್.ಮಧುಬಂಗಾರಪ್ಪ ಹೇಳಿದರು. ನಗರದಲ್ಲಿ ಮ ಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಯೋಧ್ಯೆ ಶ್ರೀರಾಮಮಂದಿರ ಉದ್ಘಾಟನೆ ಹೆಸರಲ್ಲಿ ಬಿಜೆಪಿ ಕೆಳಮಟ್ಟದ ರಾಜ ಕಾರಣಕ್ಕೆ ಮುಂದಾಗಿದೆ.
ಯಾಕೆ ನಮ್ಮ ಹೃದಯದಲ್ಲೂ ರಾಮನಿಲ್ಲವೇ? ಬೇರೆ,ಬೇರೆ ಧರ್ಮಗಳನ್ನು ಗೌರವಿಸುವುದೇ ನಿಜವಾದ ಹಿಂದು ಧರ್ಮ. ಡಾ. ಬಿ. ಆರ್.ಆಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನವೇ ನಿಜವಾದ ದೇವರು.
ಶ್ರೀರಾಮನನ್ನು ಒಂದು ಪಕ್ಷಕ್ಕೆ ಯಾರೂ ಅಡ ಇಟ್ಟಿಲ್ಲವೆಂದ ಅವರು,ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಯಾರಿಗೂ ಟಿಕೆಟ್ ಕೊಟ್ಟರೂ ಅವರನ್ನು ಗೆಲ್ಲಿಸುವ ಹೊಣೆ ನಮ್ಮ ಮೇಲಿದೆ. ನೀವು ಕಣಕ್ಕೆ ಇಳಿಯುತ್ತೀರಾ ಎಂಬ ಪ್ರಶ್ನೆಗೆ,ಟಿಕೆಟ್ ಯಾರಿಗೆ ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ.
ಗೀತಾ ಶಿವರಾಜ್‌ಕುಮಾರ್ ಕಾಂಗ್ರೆಸ್ ಪಕ್ಷದ ನಾಯಕರಿದ್ದಾರೆ. ರಾಹುಲ್‌ಗಾಂಧಿ ಅವರ ನ್ಯಾಯಯಾತ್ರೆಗೆ ಅಡ್ಡಿ ಪಡಿಸುವ ಕಿತಾಪತಿಗೆ ಬಿಜೆಪಿ ಮುಂದಾಗಿದೆ. ಬಿಜೆಪಿಯವರು ಗ್ಯಾರಂಟಿಗಳ ಲಾಭವನ್ನು ಪಡೆಯುತ್ತಿಲ್ಲವೇ? ಅವರ ಮೇಲೆ ಕಾಂಗ್ರೆಸ್ಸಿನ ಋಣವಿಲ್ಲವೇ ಎಂದು ಪ್ರಶ್ನಿಸಿದರು.ನಾನು ಬಂಗಾರಪ್ಪ ಅವ ರೊಂದಿಗೆ ಎಲ್ಲ ಪಕ್ಷಗಳನ್ನು ನೋಡಿದ್ದೇನೆ. ವೈಯಕ್ತಿಕ ನಿರ್ಧಾರದಿಂದ ಕಾಂಗ್ರೆಸ್ ಸೇರಿದ್ದೇನೆ,ಇದು ನನ್ನ ಹೆಮ್ಮೆಯ ನಿರ್ಧಾರವಾಗಿದೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net