ಶ್ರೀರಾಮ ಸೇನೆ ಸದಸ್ಯತ್ವ ಅಭಿಯಾನ ಸೆ.1ಕ್ಕೆ

shreeram sene baithak
Published on

ಬೀದರ್: ಶ್ರೀರಾಮ ಸೇನೆ ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದ್ದು, ಸೆ.1ರಿಂದ ಒಂದು ತಿಂಗಳು ಅಭಿಯಾನ ನಡೆಯಲಿದೆ ಎಂದು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ತಿಳಿಸಿದರು.

ನಗರದಲ್ಲಿ ಆಯೋಜಿಸಿದ್ದ ಸೇನೆ ಜಿಲ್ಲಾ ಘಟಕದ ಬೈಠಕ್ ನಲ್ಲಿ ಮಾತನಾಡಿ, ರಾಜ್ಯ ಸಮಿತಿ ನಿರ್ಣಯದಂತೆ ರಾಜ್ಯಾದ್ಯಂತ ಸಂಘಟನೆ ಬಲಪಡಿಸಲು ಮೂರು ತಂಡಗಳಲ್ಲಿ ಪ್ರವಾಸ ಆರಂಭಿಸಲಾಗಿದೆ. ಅಭಿಯಾನ ಯಶಸ್ಸಿಗೆ ಜಿಲ್ಲಾ ಘಟಕದ ಪದಾಕಾರಿಗಳು ಶ್ರಮಿಸಬೇಕು ಎಂದು ಕರೆ ನೀಡಿದರು.

ಸಾರ್ವಜನಿಕ ಗಣಪತಿ ಪೆಂಡಾಲಗಳಲ್ಲಿ ಬಾಲಗಂಗಾಧರ ತಿಲಕ್ ಹಾಗೂ ವೀರ ಸಾವರ್ಕರ್ ಭಾವಚಿತ್ರ ಅಳವಡಿಸುವುದರ ಜತೆಗೆ ಇಬ್ಬರು ಮಹನೀಯರ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಎಲ್ಲ ಗಣೇಶ ಮಂಡಳಗಳಿಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.ಎರಡು ದಿವಸ ಜಿಲ್ಲಾ, ತಾಲೂಕು ಘಟಕಗಳ ಅಭ್ಯಾಸ ವರ್ಗ ಮಾಡಬೇಕು ಹಾಗೂ ಬಾಕಿ ಇರುವ ಪದಾಧಿಕಾರಿಗಳ ಘೋಷಣೆ ಮಾಡಬೇಕು. ಹೋಬಳಿ, ಗ್ರಾಮ ಘಟಕ ರಚಿಸಬೇಕು. ಪ್ರತಿ ಹಳ್ಳಿಯಲ್ಲಿ ಸೇನೆ ಬೋಡ್೯ ಹಾಕಬೇಕು ಎಂದರು.

ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ ಮಾತನಾಡಿ, ಜಿಲ್ಲಾದ್ಯಂತ ಶ್ರೀರಾಮ ಸೇನೆ ಸದಸ್ಯತ್ವ ಅಭಿಯಾನ ಮಾಡಲು ಮೂರು ತಂಡ ರಚಿಸಲಾಗುವುದು. ಒಂದು ತಿಂಗಳಲ್ಲಿ 50 ಸಾವಿರದಿಂದ 1 ಲಕ್ಷ ಸದಸ್ಯತ್ವ ಗುರಿ ಹೊಂದಲಾಗಿದೆ. ಶೀಘ್ರವೇ ಗ್ರಾಮ ಮಟ್ಟದಲ್ಲಿ ಸೇನೆ ಘಟಕ ರಚನೆ ಮಾಡಲಾಗುವುದು ಎಂದರು.

ಸೇನೆ ಕಲ್ಯಾಣ ಕರ್ನಾಟಕ ಅಧ್ಯಕ್ಷ ವಿಜಯ ಪಾಟೀಲ್ ಮಾತನಾಡಿದರು. ಪ್ರಮುಖರಾದ ಡಾ.ವಿಶ್ವನಾಥ ಉಪ್ಪೆ, ಅಮೃತ ಪಾಟೀಲ್, ಶಂಕರ ಖ್ಯಾಮಾ, ಅಭಿನಯ, ಆಕಾಶ ಮೇತ್ರೆ, ಆಕಾಶ ಕೋಡಗೆ, ಸೂರ್ಯಕಾಂತ ಯಾಬಾ, ಹಣಮು ಪಾಜಿ, ನಾಗು ನಿಜಾಂಪುರ, ಶಿವಕುಮಾರ ಸಿಂಧೆ, ಶಿವಕುಮಾರ ಪಾಟೀಲ್, ಅವಿನಾಶ ಖಂದಾರೆ ಇತರರಿದ್ದರು. ಮಲ್ಲಿಕಾರ್ಜುನ ಕುಂಬಾರ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net