ಶ್ರೀರಾಮ ಸೇನೆ, ದುರ್ಗಾ ಸೇನೆಯಿಂದ ಪ್ರತಿಭಟನೆ

protest-fist-sketch-22337688
Published on

ಸವದತ್ತಿ: ಯಲ್ಲಮ್ಮ ದೇವಿಯ ದರ್ಶನ ವೇಳೆ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಗಿ ಮೇಲೆ ಸವದತ್ತಿ ಪೊಲೀಸ್ ಪೇದೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಶ್ರೀರಾಮ ಸೇನೆ ಹಾಗೂ ಶ್ರೀ ದುರ್ಗಾಸೇನೆ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಅಣ್ಣಪ್ಪ ದಿವಟಗಿ ಮೇಲೆ ಜು. 10ರಂದು ಸವದತ್ತಿ ಪೊಲೀಸರು ಹಲ್ಲೆ ನಡೆಸಿದಾಗ, ತಲೆ ಒಡೆದು ರಕ್ತಸ್ರಾವವಾದರೂ ಆಸ್ಪತ್ರೆಗೆ ದಾಖಲಿಸದೆ ನಿರ್ಲಕ್ಷಿಸಿದ್ದಾರೆ. ಸಂಬಂಧಪಟ್ಟ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಸವದತ್ತಿ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಗದಿಗೆಪ್ಪ ಕುರುವತ್ತಿ, ಮಂಜು ಕಾಟಕರ, ಮಹಾಲಿಂಗ ಅಗಳಿ, ಮೈಲಾರ ಗುಡ್ಡಪ್ಪನವರ, ಬಸವರಾಜ ದುರ್ಗದ, ಪೂರ್ಣಿಮಾ ಕಾಡಮ್ಮನವರ, ಶಿವಕುಮಾರ ಕೆ.ಎಲ್., ಶಶಿಕಲಾ ದಡೋತಿ, ಬಸು ಗೌಡರ, ಮಹಾಂತೇಶ ತೊಂಗಳಿ, ವೀರಯ್ಯ ಸಾಲಿಮಠ, ಗುಣಧರ ದಡೋತಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net