ಶ್ರೀರಾಮ ಸೇನೆ ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣ:ಹುಕ್ಕೇರಿ ಪಿಎಸ್ಐ ಅಮಾನತು

IMG-20250701-WA0072
Published on

ಶ್ರೀರಾಮ ಸೇನೆ ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣ:ಹುಕ್ಕೇರಿ ಪಿಎಸ್ಐ ಅಮಾನತು

ಚಿಕ್ಕೋಡಿ: ಹುಕ್ಕೇರಿ ತಾಲೂಕಿನ

ಇಂಗಳಿ ಗ್ರಾಮದಲ್ಲಿ ನಡೆದ ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ‌.

ಶ್ರೀರಾಮ ಸೇನೆ ಕಾರ್ಯಕರ್ತರು ಗೋವು ಸಮೇತ ಹುಕ್ಕೇರಿ ಪೋಲಿಸ್ ಠಾಣೆಗೆ ದೂರ ನೀಡಲು ಹೋಗಿದ್ದ ವೇಳೆ ದೂರು ಎಫ್‌ಐಆರ್ ದಾಖಲಿಸದೆ,ಬಿಟ್ಟು ಕಳುಹಿಸಿ ನಿರ್ಲಕ್ಷ್ಯ ತೋರಿದ ಆರೋದದಡಿ ಹುಕ್ಕೇರಿ ಪಿಎಸ್ಐ ಅಮಾನತು ಮಾಡಲಾಗಿದೆ.

ಹುಕ್ಕೇರಿ ಪೊಲೀಸ್ ಠಾಣೆ ಪಿಎಸ್‌ಐ ನಿಖಿಲ್ ಕಾಂಬ್ಳೆ ಅಮಾನತುಗೊಂಡ ಪಿಎಸ್ಐ.ಕಳೆದ

ಜೂ. 26ರಂದು ಗೋವು ಸಾಗಿಸುತ್ತಿದ್ದ ವಾಹನ ತಡೆದು ಪೊಲೀಸ್ ಠಾಣೆಗೆ ತಂದಿದ್ದ,ಶ್ರೀರಾಮ ಸೇನೆ ಕಾರ್ಯಕರ್ತರ ದೂರನ್ನು ದಾಖಲಿಸದೇ ಬಿಟ್ಟು ಕಳುಹಿಸಿದ್ದ, ಪಿಎಸ್‌ಐನನ್ನು ಎಸ್ ಪಿ ಭೀಮಾಶಂಕರ ಗುಳೇದ ಅಮಾನತು ಮಾಡಿ ಆದೇಶ ಹೊರಡಿದ್ದಾರೆ‌.

ಘಟನೆ ಕುರಿತು ಮೇಲಾಧಿಕಾರಿಗಳ‌ ಗಮನಕ್ಕೆ ತರದೇ ಬೇಜವಾಬ್ದಾರಿ ತೊರಿದ್ದು,ಹಾಗೂ

ಗಡಿಪಾರಾದ ರೌಡಿ ಶೀಟರ್ ಶ್ರೀರಾಮ ಸೇನೆ ಕಾರ್ಯಕರ್ತ ಮಹಾವೀರ್ ಸೊಲ್ಲಾಪುರೆಯನ್ನ ಕೂಡ ಬಿಟ್ಟು ಕಳುಹಿಸಿದ್ದ ಪಿಎಸ್‌ಐನ್ನು ಅಮಾನತು ಮಾಡಲಾಗಿದೆ‌.

ಇನ್ನು ರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ ಖಂಡಸಿ,ಜೂ.೩ ರಂದು ಇಂಗಳಿ ಚಲೋಗೆ ಪ್ರಮೋದ ಮುತಾಲಿಕ ಕರೆ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net