ಶ್ರೀರಾಮ ಆಶೀರ್ವದಿಸು ಭಕ್ತಿಗೀತೆ ಲೋಕಾರ್ಪಣೆ

19 ckm 1
ಚಿಕ್ಕಮಗಳೂರಿನ ರತ್ನಗಿರಿ ರಸ್ತೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ಆಶೀರ್ವದಿಸು ಗೀತೆಯನ್ನು ಶ್ರೀರಾಮ ಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ಸುಭಾಶ್ಚಂದ್ರ ಭಟ್ ಲೋಕಾರ್ಪಣೆಗೊಳಿಸಿದರು. ನಾಗರಾಜರಾವ್ ಕಲ್ಕಟ್ಟೆ, ರಾಯನಾಯಕ್, ರೇಖಾನಾಗರಾಜರಾವ್, ದೀಪಕ್ ದೊಡ್ಡಯ್ಯ, ಶಾಂತಾ ಮಲ್ಲೇಶರಾವ್, ಮಮತಾ ಆರ್.ನಾಯಕ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ನಗರದಲ್ಲಿರುವ ಪ್ರತಿ ದೇವಾಲಯಗಳ ಕುರಿತು ಭಕ್ತಿಗೀತೆ ಸಮರ್ಪಿಸುವ ಕಾರ್ಯ ನಿಜಕ್ಕೂ ಅಭಿನಂದನೀಯ. ಅದರಲ್ಲೂ ನಮ್ಮ ಆರಾಧ್ಯ ದೇವ ರತ್ನಗಿರಿ ರಸ್ತೆಯ ಮಂದಿರದ ಶ್ರೀರಾಮನನ್ನು ಗೀತೆಯ ಮೂಲಕ ಸ್ತುತಿಸಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಶ್ರೀರಾಮ ಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ಸುಭಾಶ್ಚಂದ್ರ ಭಟ್ ತಿಳಿಸಿದರು.

ನಗರದ ರತ್ನಗಿರಿ ರಸ್ತೆಯ ಶ್ರೀರಾಮ ಮಂದಿರದಲ್ಲಿ ಸಾಹಿತಿ ನಾಗರಾಜರಾವ್ ಕಲ್ಕಟ್ಟೆ ರಚಿಸಿ, ಸಂಗೀತ ಸಂಯೋಜಿಸಿ, ಗಾಯಕ ರಾಯನಾಯಕ್ ಅವರೊಂದಿಗೆ ಹಾಡಿದ `ಶ್ರೀರಾಮ ಆಶೀರ್ವದಿಸು ಗೀತೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ರಾಮ ಆದರ್ಶ ಪುರುಷ. ಅವನ ಗುಣಗಾನ ಮಾಡುತ್ತಲೇ ಈ ದೇವಾಲಯದ ವಿಶೇಷಣಗಳನ್ನೂ ತಿಳಿಸುವ ಪ್ರಯತ್ನವನ್ನು ಮಾಡಿರುವುದು ಅಭಿನಂದನೀಯ. ರಾಮನಾಮ ಭಜನೆಗೆ ಹೊಸಗೀತೆ ಹುರುಪು ತುಂಬುವAತಿದೆ ಎಂದು ತಿಳಿಸಿದರು.

ಯುರೇಕಾ ಅಕಾಡೆಮಿಯ ಸ್ಥಾಪಕ ದೀಪಕ್ ದೊಡ್ಡಯ್ಯ ಮಾತನಾಡಿ, ಮರ್ಯಾದಾ ಪುರುಷೋತ್ತಮ ಶ್ರೀರಾಮ ಆದರ್ಶಗಳನ್ನು ಅನುಸರಿಸಿದರೆ ದೇಶ ನಿಜಕ್ಕೂ ರಾಮರಾಜ್ಯವಾಗುತ್ತದೆ. ಸಂಗೀತ ಈಗ ಚಿಕಿತ್ಸೆಯ ಸ್ವರೂಪದಲ್ಲಿ ಬಳಕೆಯಾಗುತ್ತಿದೆ. ಬೆಳಗ್ಗೆ ಭಕ್ತಿಗೀತೆ ಕೇಳುವುದರಿಂದ ಮನಸ್ಸು ಪ್ರಪುಲ್ಲವಾಗುತ್ತದೆ ಎಂದರು.

ಸಂಗೀತ ಮತ್ತು ನೃತ್ಯ ಅಕಾಡೆಮಿಯ ಮಾಜಿ ಸದಸ್ಯೆ ರೇಖಾ ಪ್ರೇಮ್‌ಕುಮಾರ್ ಮಾತನಾಡಿ, ಕಲ್ಕಟ್ಟೆ ಗಾನ ದೀವಿಗೆ ಸರಣಿ ನಿಜಕ್ಕೂ ಭಕ್ತಿ ಪೂರ್ವಕ ಕಾರ್ಯ. ಸಾಮೂಹಿಕ ಭಜನೆಗಳು ಎಲ್ಲರಿಗೂ ಪ್ರೇರಣಾದಾಯಕ ಎಂದು ಹೇಳಿದರು.

ನಾಟಿ ವೈದ್ಯೆ ಶಾಂತಾ ಮಲ್ಲೇಶರಾವ್, ಪ್ರಮುಖರಾದ ಮಮತಾ ಆರ್.ನಾಯಕ್, ಶ್ರಫತ ನಾಯಕ್, ವಿಶ್ವನಾಥ ನಾಯಕ್, ಜ್ಯೋತಿ ಪ್ರಕಾಶ್ ಪೈ, ದೇವದಾಸ ಹೆಗಡೆ, ನಿರ್ಮಲಾ ಬಾಳಿಗಾ, ಗೋಪಿನಾಥ್, ಲಾಲಿತ್ಯ, ದರ್ಶನ್, ಲಕ್ಷ್ಮೀ, ರಘುನಾಥ್ ಭಟ್, ಕಲ್ಕಟ್ಟೆ ನಾಗರಾಜರಾವ್, ರಾಯನಾಯಕ್, ರೇಖಾ ನಾಗರಾಜರಾವ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net