ಶ್ರೀರಾಂಪುರ ಬಡಾವಣೆಯಲ್ಲಿ ಶಾಸಕ ಶ್ರೀವತ್ಸ ಪಾದಯಾತ್ರೆ

61
Published on

ಮೈಸೂರು: ಶ್ರೀರಾಂಪುರ ಬಡಾವಣೆಯಲ್ಲಿ ಸೋಮವಾರ ಪಾದಯಾತ್ರೆ ನಡೆಸಿದ ಶಾಸಕ ಟಿ.ಎಸ್.ಶ್ರೀವತ್ಸ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಬೀದಿ ನಾಯಿಗಳ ಹಾವಳಿ ತಪ್ಪಿಸಿ, ನೇರ ಬಸ್ ಸಂಪರ್ಕ ಕಲ್ಪಿಸಿ, ಸ್ವಚ್ಛತೆ ಕಾಪಾಡುವಂತೆ ಸ್ಥಳೀಯರು ಮನವಿ ಮಾಡಿದರು. ಗಣಪತಿ ದೇವಸ್ಥಾನದ ಹಿಂಭಾಗ ಇರುವ ಅಡ್ಡ ರಸ್ತೆಗಳಲ್ಲಿ ಒಳಚರಂಡಿ ಸಮಸ್ಯೆ ಕಂಡು ಬಂದಿದ್ದು, ಚರಂಡಿ ನೀರು ಮನೆ ಒಳಗೆ ಹೋಗುವಂತೆ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಲಾಗಿದ್ದು, ಅದನ್ನು ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಶ್ರೀರಾಂಪುರ, ಕುವೆಂಪುನಗರ, ಜಯನಗರ ಭಾಗದ ಜನರಿಗೆ ರೈಲ್ವೆ ನಿಲ್ದಾಣ, ಗ್ರಾಮಾಂತರ ಬಸ್ ನಿಲ್ದಾಣಕ್ಕೆ ನೇರ ಬಸ್ ಸಂಪರ್ಕ ಸೌಲಭ್ಯವಿಲ್ಲ. ಹಾಗಾಗಿ ನೇರ ಬಸ್ ಸಂಪರ್ಕ ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂದು ಮನವಿ ಮಾಡಿದರು.
ಶ್ರೀರಾಂಪುರ 9 ಮತ್ತು 10ನೇ ಕ್ರಾಸ್ ಸುತ್ತಲ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದರು.
ನಗರಪಾಲಿಕೆ ಸದಸ್ಯೆ ಗೀತಾ ಶ್ರೀಯೋಗಾನಂದ, ಮುಖಂಡರಾದ ಗಿರೀಶ್, ಮನೋಜ್, ಜಯರಾಂ, ಮನೋಜ್, ಮಂಜುನಾಥ್, ಸತೀಶ್, ಪಾಪಣ್ಣ, ಭರತ್, ಚೇತನ್, ಬಿ.ಕೆ.ಮಂಜುನಾಥ, ಸುವರ್ಣಾ, ಜಯಂತಿ, ಶೋಭಾ, ಅಶೋಕ, ಜಗದೀಶ್, ಸಿದ್ದರಾಜು, ಜಗದೀಶ್, ಶಿವಾನಂದ, ಜೋಗಿ ಮಂಜು, ಪ್ರದೀಪ್, ಕಿಶೋರ್, ಶಿವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net