ಶ್ರೀರಕ್ಷಾ ಪ್ರಭಾಕರ್‌ಗೆ ರೋಟರ‌್ಯಾಕ್ಟ್ ನವರತ್ನ ಪ್ರಶಸ್ತಿ ಪ್ರದಾನ

13.npk-1
ಮೂರ್ನಾಡು ಪದವಿ ಪೂರ್ವ ಕಾಲೇಜಿನ ರೋಟರ‌್ಯಾಕ್ಟ್ ನಿಕಟಪೂರ್ವ ಅಧ್ಯಕ್ಷೆ ಶ್ರೀರಕ್ಷಾ ಪ್ರಭಾಕರ್ ಅವರಿಗೆ ರೋಟರ‌್ಯಾಕ್ಟ್ ನವರತ್ನ -2023 ಪ್ರಶಸ್ತಿ ಪ್ರದಾನ ಮಾಡಲಾಯಿತು.
Published on

ನಾಪೋಕ್ಲು: ಸಮೀಪದ ಮೂರ್ನಾಡು ಪದವಿ ಪೂರ್ವ ಕಾಲೇಜಿನ ರೋಟರ‌್ಯಾಕ್ಟ್ ನಿಕಟಪೂರ್ವ ಅಧ್ಯಕ್ಷೆ ಶ್ರೀರಕ್ಷಾ ಪ್ರಭಾಕರ್ ಅವರಿಗೆ ರೋಟರ‌್ಯಾಕ್ಟ್ ನವರತ್ನ -2023 ಪ್ರಶಸ್ತಿ ಲಭಿಸಿದೆ.

ಪುತ್ತೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾ ರೋಟರ‌್ಯಾಕ್ಟ್ ಕ್ಲಬ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶ್ರೀರಕ್ಷಾ ಪ್ರಭಾಕರ್ ಅವರಿಗೆ ರೋಟರ‌್ಯಾಕ್ಟ್ ಜಿಲ್ಲಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಆರ್.ಕೆ.ನಿಖಿಲ್, ನೂತನ ಸಾಲಿನ ಸಂಚಾಲಕ ಮಹಮ್ಮದ್ ಅಸ್ಲಂ ಪ್ರಶಸ್ತಿ ಪ್ರದಾನ ಮಾಡಿದರು.

ಶ್ರೀರಕ್ಷಾ ರೋಟರ‌್ಯಾಕ್ಟ್ ಅಧ್ಯಕ್ಷೆಯಾದ ಬಳಿಕ ಕೈಗೊಂಡ ಸಮಾಜಮುಖಿ ಕಾರ್ಯಗಳಿಗಾಗಿ ಈ ಪ್ರಶಸ್ತಿ ಲಭಿಸಿದೆ. ಅಲ್ಲದೆ ಇವರನ್ನು 2023-24 ಸಾಲಿನ ಜಿಲ್ಲಾ ರೋಟರ‌್ಯಾಕ್ಟ್‌ನ ಸಾಂಸ್ಕೃತಿಕ ತಂಡದ ಅಧ್ಯಕ್ಷೆಯನ್ನಾಗಿ ನೇಮಕ ಮಾಡಲಾಗಿದೆ. ಮೂರ್ನಾಡು ಪದವಿ ಕಾಲೇಜಿನ ರೋಟರ‌್ಯಾಕ್ಟ್ ಕ್ಲಬ್ನ ಸಲಹೆಗಾರರಾಗಿ ರೋಟರಿ ಮಡಿಕೇರಿ ವುಡ್ಸ್ ಸಂಸ್ಥೆಯ ಸಂಪತ್‌ಕುಮಾರ್, ವಸಂತ್‌ಕುಮಾರ್, ಹರೀಶ್ ಕಿಗ್ಗಾಲು, ಎನ್.ಸಿ.ನವೀನ್, ಬೋಪಣ್ಣ ಇತರರಿದ್ದರು.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net