ಶ್ರೀರಂಗಪಟ್ಟಣದಲ್ಲಿ ಮದಕರಿ ನಾಯಕ ಸ್ಮಾರಕ ನಿರ್ಮಾಣ

CTD MANAVI-RAJAVEERA MADAKRA NAYKRU-----
Published on

ಚಿತ್ರದುರ್ಗ: ಚಿತ್ರದುರ್ಗವನ್ನಾಳಿದ ರಾಜವೀರ ಮದಕರಿನಾಯಕರ ಸ್ಮಾರಕವನ್ನು ಶ್ರೀರಂಗಪಟ್ಟಣದಲ್ಲಿ ನಿರ್ಮಿಸುವಂತೆ ನವಭಾರತ ಹಿಂದು ದಲಿತ ಸಂಘ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು.

ಚಿತ್ರದುರ್ಗದ ಏಳು ಸುತ್ತಿನ ಕೋಟೆಯನ್ನಾಳಿದ ಕೊನೆಯ ದೊರೆ ರಾಜಾವೀರ ಮದಕರಿನಾಯಕ ಕ್ರಿ.ಶ. 1782 ಮೇ 15 ರಂದು ಶ್ರೀರಂಗಪಟ್ಟಣದಲ್ಲಿ ಕೊನೆಯುಸಿರೆಳೆದಿದ್ದು, ಪಶ್ಚಿಮವಾಹಿನಿಯಲ್ಲಿ ಅವರ ಅಂತಿಮ ಸಂಸ್ಕಾರ ನೆರವೇರಿದೆ. ಆದ್ದರಿಂದ ಶ್ರೀರಂಗಪಟ್ಟಣದಲ್ಲಿ ಸ್ಮಾರಕ ನಿರ್ಮಿಸಬೇಕು.

ಈ ಸಂಬಂಧ ಮುಖ್ಯಮಂತ್ರಿ, ಪ್ರಧಾನಮಂತ್ರಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಬೇಡಿಕೆ ಈಡೇರದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ ಪ್ರತಿಭಟನಾಕಾರರು, ಎಸಿ ಮೆಹಬೂಬ್ ಜಿಲಾನಿ ಖುರೇಷಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ರಾಜ್ಯ ನವಭಾರತ ಹಿಂದು ದಲಿತ ಸಂಘದ ಅಧ್ಯಕ್ಷ ಎಂ. ಕುಮಾರಸ್ವಾಮಿ,ಲಕ್ಷ್ಮೀಸಾಗರ ರಾಜಣ್ಣ,ಬಾಲೇನಹಳ್ಳಿ ನಾಗಣ್ಣ, ಸುರೇಶ್, ಗಾದ್ರಿಅಣ್ಣಪ್ಪ, ಮಂಜುನಾಥ್, ಮಣಿ, ದಿಲೀಪ, ರಾಜಣ್ಣ ಇತರರು ಪ್ರತಿಭಟನೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net