ಶ್ರೀರಂಗಪಟ್ಟಣದಲ್ಲಿ ಅಪ್ಪು ಸ್ಮರಣೆ

IMG_20221030_142448
Published on

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಬೀದಿಬದಿ ವ್ಯಾಪಾರಿಗಳು ನಟ ಪುನೀತ್ ರಾಜ್‌ಕುಮಾರ್ ಅವರ ಮೊದಲ ವರ್ಷದ ಪುಣ್ಯಸ್ಮರಣೆಯನ್ನು ಆಚರಿಸಿದರು. ಪಟ್ಟಣದ ಪೊಲೀಸ್ ಠಾಣೆ ಸಮೀಪದ ಮುಖ್ಯರಸ್ತೆಯಲ್ಲಿ ಅಪ್ಪುವಿನ ಬೃಹತ್ ಭಾವಚಿತ್ರ ಇಟ್ಟು ವಿವಿಧ ಖಾದ್ಯಗಳು, ತಿಂಡಿ-ತಿನಿಸುಗಳು ಹಾಗೂ ಮಾಂಸದೂಟದ ಎಡೆ ಇರಿಸಿ ದೀಪ ಬೆಳಗಿ ಪೂಜೆ ಸಲ್ಲಿಸಿದರು. ಬಳಿಕ ನೂರಾರು ಜನರಿಗೆ ತರಕಾರಿ ಪಲಾವ್ ವಿತರಿಸಲಾಯಿತು.

ವಕೀಲ ಪವನ್, ಅಪ್ಪು ಅಭಿಮಾನಿಗಳ ಸಂಘದ ಮುಖ್ಯಸ್ಥ ಗೋಬಿ ಹರೀಶ್, ವೆಂಕಟೇಶ್, ಮನು, ಶಿವು, ಸುರೇಶ್, ದೇವರಾಜ್ ಅಜಯ್ ಕುಮಾರ್, ರಾಜು, ಗೌತಮ್, ಪುರುಷೋತ್ತಮ , ಪಾನಿಪುರಿ ಫಣೀಂದ್ರ, ರಮೇಶ್, ಪ್ರೀತಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net