ಶ್ರೀಯೋಗಿನಾರಯಣ ಬಣಜಿಗ (ಬಲಿಜ ) ಸಂಘದಿಂದ ಕಣ್ಣಿನ ಉಚಿತ ತಪಾಸಣೆ ಶಿಬಿರ

16
Published on

ಮೈಸೂರು: ಕಣ್ಣಿನ ಸಮಸ್ಯೆಯ ಅರಿವಿಲ್ಲದೆ ಹಲವರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕಾಲ, ಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮೈಲಾಕ್ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್ ಹೇಳಿದರು.
ಶ್ರೀಯೋಗಿನಾರಯಣ ಬಣಜಿಗ (ಬಲಿಜ ) ಸಂಘ, ವಾಸನ್ ಐ ಕೇರ್ ಮತ್ತು ಎಎಸ್‌ಜಿ ಕಣ್ಣಿನ ಆಸ್ಪತ್ರೆಯಿಂದ ಭಾನುವಾರ ಬಣಜಿಗ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರ ಉದ್ಘಾಟಿಸ ಅವರು ಮಾತನಾಡಿದರು.
ಕಣ್ಣಿನ ನೂನ್ಯತೆಯನ್ನು ಪತ್ತೆ ಮಾಡಲು ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದ ವರೆಗೆ ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಬೇಕು. ಆಗ ಸಮಸ್ಯೆಯನ್ನು ಆರಂಭದಲ್ಲಿಯೇ ಪತ್ತೆ ಮಾಡಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಂಘದ ಅಧ್ಯಕ್ಷ ಎಂ.ನಾರಾಯಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನ ಸಾಗಿಸಲು ಕಣ್ಣು ಅತಿ ಮುಖ್ಯವಾಗಿದ್ದು, ಅದರ ಸಂರಕ್ಷಣೆ ಅಗತ್ಯ. ಪೌಷ್ಠಿಕಯುಕ್ತ ಆಹಾರ ಸೇವನೆಗೆ ಒತ್ತು ನೀಡಬೇಕು ಎಂದು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಚ್. ಆರ್. ಗೋಪಾಲಕೃಷ್ಣ ಮಾತನಾಡಿದರು.ನೇತ್ರ ತಜ್ಞೆ ಡಾ. ಸಾನಿಯಾ ಫಾತಿಮಾ, ಟೆಕ್ನಿಕಲ್ ಅಸಿಸ್ಟೆಂಟ್ ಶಿವಪ್ರಸಾದ್, ಕಾರ್ಯಕ್ರಮ ಸಂಯೋಜಕ ಡಾ.ಟಿ.ರಮೇಶ, ಸಂಘದ ನಿರ್ದೇಶಕರಾದ ಕುರಟ್ಟಿ ಗೋಪಾಲಕೃಷ್ಣ, ಬಿ.ಕೆ.ಸುರೇಶ್, ಪಾರ್ಥಸಾರತಿ, ನಿಲಯದ ಮೆಲ್ವಿಚಾರಕ ಎಚ್.ಆರ್.ವೆಂಕಟೇಶ್, ನಿಲಯಪಾಲಕ ಎಂ.ಸಿ.ರಘುಶೆಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net