

ಕಾಗವಾಡ: ಅಲ್ಪಸಂಖ್ಯಾತ ಇಲಾಖೆ ಸಚಿವರಾಗಿದ್ದ ಸಂದರ್ಭದಲ್ಲಿ ಜೈನ ಸಮುದಾಯಕ್ಕೆ ಸಾಕಷ್ಟು ಅನುದಾನ ನೀಡಿದ ಹೆಮ್ಮೆ ನನಗಿದೆ ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ ಹೇಳಿದರು.
ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ ಜರುಗಿದ ದಕ್ಷಿಣ ಭಾರತ ಜೈನ ಸಭೆಯ ೧೦೩ನೇ ತ್ರೈವಾರ್ಷಿಕ ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಜೈನ ಸಮುದಾಯದ ಬಸ್ತಿಗೆ ಡಿಬಿಟಿ ಮುಖಾಂತರ ಅನುದಾನ ಬಿಡುಗಡೆ, ರಾಜ್ಯದ ಹಲವಾರು ಬಸದಿಗೆ ಶುದ್ಧ ಕುಡಿಯುವ ನೀರಿನ ಘಟಕ, ಎಲ್ಲ ಬಸದಿಗೆ ೧೦೦ ಕೋಟಿ ರೂ. ಅನುದಾನ ಮಂಜೂರು ಮಾಡಿದ್ದೇನೆ. ತೀರ್ಥ ಕ್ಷೇತ್ರ ಶ್ರವಣ ಬೆಳಗೋಳಕ್ಕೆ ೫೦ ಕೋಟಿ ರೂ. ಬಿಡುಗಡೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಲ್ಲಿ ಬರುವ ಎಲ್ಲ ಶಾಲೆಗಳಿಗೆ ಅನುದಾನ, ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್ ನಿರ್ಮಿಸಿರುವುದಾಗಿ ತಿಳಿಸಿದರು.
ಅನೇಕ ಜೈನ ಮುನಿಗಳು, ಭಟ್ಟಾರಕ ಪಟ್ಟಾಚಾರ್ಯರು, ಶಾಸಕ ರಾಜೇಂದ್ರ ಪಾಟೀಲ-ಯಡ್ರಾಂವಕರ, ಯುವ ಮುಖಂಡ ಉತ್ತಮ ಪಾಟೀಲ ಗಣ್ಯರು ಇದ್ದರು.