ಶ್ರೀಭಗೀರಥರ ಆದರ್ಶಗಳು ಅನುಕರಣೀಯ

04rajesh05
Published on

ಚಾಮರಾಜನಗರ: ದೇಶದ ಪುರಾಣದಲ್ಲಿ ಬರುವಂತಹ ಶ್ರೀ ಮಹರ್ಷಿ ಭಗೀರಥ ಹಾಗೂ ಮಹರ್ಷಿ ವಾಲ್ಮೀಕಿ ನಮ್ಮ ಆಧ್ಯಾತ್ಮೀಕ ಶಕ್ತಿಗಳು ಎಂದು ಬಿಜೆಪಿ ರಾಷ್ಟೀಯ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯಕಾರಣಿ ಸದಸ್ಯ ನೂರೊಂದುಶೆಟ್ಟಿ ತಿಳಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶ್ರೀ ಮಹರ್ಷಿ ಭಗೀರಥರು ತಮ್ಮ ತಪಸ್ಸಿನ ಶಕ್ತಿಯಿಂದ ಗಂಗೆಯನ್ನು ಧರೆಗೆ ತರುವ ಮೂಲಕ ಮಹಾ ಪುರುಷರು ಹಾಗೂ ಆಧ್ಯಾತ್ಮಿಕ ನಾಯಕರಾಗಿದ್ದಾರೆ. ಹಿಂದು ಪರಂಪರೆಯಲ್ಲಿ ಮಹರ್ಷಿಗಳಾದ ಭಗೀರಥ ಮಹರ್ಷಿಗಳಿಗೆ ಅಗ್ರ ಸ್ಥಾನವನ್ನು ನೀಡಲಾಗಿದೆ. ಶ್ರೀ ಭಗಿರಥ ಮಹಾರಾಜರು ವರ್ಷನುಗಟ್ಟಲೆ ಒಂದೇ ಕಾಲಿನಲ್ಲಿ ನಿಂತು ತಪಸ್ಸು ಮಾಡುವ ಮೂಲಕ ದಿವ್ಯಶಕ್ತಿಯನ್ನು ಪಡೆದುಕೊಂಡರು.ಇಂಥ ಮಹಾಪುರುಷರ ಜಯಂತಿ ನಮ್ಮೆಲ್ಲರ ಜೀವನದ ಪ್ರೇರಣಾಶಕ್ತಿಯಾಗಿದೆ ಎಂದರು.

ಕೇಂದ್ರ ಬರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ ಮಾತನಾಡಿ, ಭಗೀರಥ ಮಹರ್ಷಿಗಳ ಜಯಂತಿಯನ್ನು ಆಚರಣೆ ಮಾಡುವ ಜೊತೆಗೆ ಅವರ ಕೊಡುಗೆಯನ್ನು ಸ್ಮರಣೆ ಮಾಡಿಕೊಳ್ಳೊಣ. ಅವರು ಗಂಗೆಯನ್ನು ಧರೆಗೆ ತರಲು ಪಟ್ಟ ಪ್ರಯತ್ನ ಹೆಚ್ಚಿನದಾಗಿದೆ. ಇಂಥ ಮಹಾ ಪುರುಷರ ಜಯಂತಿಯನ್ನು ಆಚರಣೆ ಮಾಡುವ ಮೂಲಕ ಜಗತ್ತಿಗೆ ಹಾಗೂ ಮುಂದಿನ ಪೀಳಿಗೆಗೆ ಅವರ ತತ್ವ ಅದರ್ಶಗಳನ್ನು ತಿಳಿಸೋಣ ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಸುರೇಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೂಡ್ನಾಕೂಡು ಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ಚುಡಾ ಮಾಜಿಅಧ್ಯಕ್ಷರಾದ ಕುಲಗಾಣಶಾಂತಮೂರ್ತಿ, ಎಸ್. ಬಾಲಸುಬ್ರಮಣ್ಯ, ಜಿಲ್ಲಾ ಮಾಧ್ಯಮ ವಕ್ತಾರ ಕಾಡಹಳ್ಳಿ ಕುಮಾರ್, ಕೂಸಣ್ಣ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಆನಂದ ಭಗೀರಥ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಲೆಯೂರು ಕಮಲಮ್ಮ, ನಗರ ಘಟಿಕದ ಅಧ್ಯಕ್ಷೆ ಯಶೋಧಾ, ನಗರ ಘಟಕದ ಅಧ್ಯಕ್ಷ ಶಿವರಾಜ್, ಚಂದ್ರಶೇಖರ್, ಜಿಲ್ಲಾ ಉಪಾಧ್ಯಕ್ಷ ಶಿವು ವಿರಾಟ್, ಕೇಬಲ್ ಪಿ. ರಂಗಸ್ವಾಮಿ, ಶಿವಣ್ಣ, ಕೋಡಿಮೋಳೆ ಶಿವಶಂಕರ್,ಮಂಜು ಹುಲ್ಲೇಪುರ, ಕೂಸಣ್ಣ, ಬಂಗಾರನಾಯಕ, ಶಿವರಾಮಸಮುದ್ರ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net