ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ

12KMD-1
Published on

ಕೆ.ಎಂ.ದೊಡ್ಡಿ: ಇಲ್ಲಿನ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಲೋಕಕಲ್ಯಾಣಾರ್ಥಕ್ಕಾಗಿ ಶ್ರೀನಿವಾಸ ಕಲ್ಯಾಣೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲ್ಲಿ ವೈಭವದಿಂದ ನೆರವೇರಿತು.

ಇತ್ತೀಚಿಗೆ ಉದ್ಘಾಟನೆಗೊಂಡಿದ್ದ ದೇವಾಲಯದಲ್ಲಿ ಶ್ರೀ ವೆಂಕಟೇಶ್ವರ ಸೇವಾ ಸಮಿತಿ ಪ್ರಥಮ ಬಾರಿಗೆ ಕಲ್ಯಾಣೋತ್ಸವ ಆಯೋಜಿಸಿತ್ತು. ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಸಾವಿರಾರು ಭಕ್ತರು ಕಲ್ಯಾಣೋತ್ಸವದಲ್ಲಿ ಭಾಗಿಯಾಗಿ ಧನ್ಯತೆ ಮೆರೆದರು.

ಶ್ರೀ ವೆಂಕಟೇಶ್ವರ ಮೂರ್ತಿ ಮತ್ತು ಉತ್ಸವ ಮೂರ್ತಿಗಳಿಗೆ ಎಣ್ಣೆ ಮಜ್ಜನ, ಮಹಾಭಿಷೇಕ ನೆರವೇರಿಸಲಾಯಿತು. ನಂತರ ಅಲಂಕೃತಗೊಂಡ ಶ್ರೀದೇವಿ, ಭೂದೇವಿ ಉತ್ಸವಮೂರ್ತಿಯನ್ನು ವೈಭವದ ಮೆರವಣಿಗೆ ಮೂಲಕ ಅಶ್ವಥ(ಅರಳಿ) ಕಟ್ಟೆಗೆ ಕೊಂಡೊಯ್ದು ಅಶ್ವಥ ಪೂಜೆ ನೆರವೇರಿಸಲಾಯಿತು.ಮೇಲುಕೋಟೆಯ ವೈದಿಕ ಡಾ.ಶೆಲ್ವಪಿಳೈ ಅಯ್ಯಂಗಾರ್ ನೇತೃತ್ವದಲ್ಲಿ ಮಂಗಳವಿಧಿಗಳು ನೆರವೇರಿದವು. ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ಕಲ್ಯಾಣೋತ್ಸವ ಅಂಗವಾಗಿ ವಿವಿಧ ಹೋಮ-ಹವನ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net