

ಸವಣೂರ: ನವರಾತ್ರಿ ಅಂಗವಾಗಿ ತಾಲೂಕಿನ ಹುರಳಿಕುಪ್ಪಿ ಗ್ರಾಮದ ಶ್ರೀ ದ್ಯಾಮವ್ವದೇವಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನ ಕಾರ್ಯಕ್ರಮ, ವಿವಿಧ ಧಾಮಿರ್ಕ ಕೈಂಕರ್ಯಗಳು ಗ್ರಂಥ ಮೆರವಣಿಗೆಯೊಂದಿಗೆ ಸಂಪನ್ನಗೊಳಿಸಲಾಯಿತು.
ಹುಬ್ಬಳ್ಳಿ ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಕುಂಭಮೇಳಕ್ಕೆ ಶುಭ ಹಾರೈಸಿದರು. ಗದಗಿನ ಶ್ರೀ ವೀರೇಶ್ವರ ಪುಣ್ಯಾತ್ಮ ವಿನಯಕುಮಾರ ಶಾಸಿ ನೇತೃತ್ವ ವಹಿಸಿದ್ದರು. ಕುಮಾರಸ್ವಾಮಿ ಪುಣ್ಯಕೋಟಿ ಗವಾಯಿ ಸಂಗೀತ ಸೇವೆ ಸಲ್ಲಿಸಿದರು. ದೇವಿಯ ಅರ್ಚಕ ಈರಣ್ಣ ಬಡಿಗೇರ, ಸಿದ್ದಲಿಂಗಯ್ಯ ಹಿರೇಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಜೆ. ಮುಲ್ಲಾ, ಪ್ರಮುಖರಾದ ನಾಗಪ್ಪ ತಿಪ್ಪಕನವರ, ಪಾಂಡಪ್ಪ ತಿಪ್ಪಕವರ, ಯಲ್ಲಪ್ಪ ಇಟಗಿ, ಉಮೇಶ ದೊಡ್ಡಮನಿ, ಬರಮಪ್ಪ ವೈಯಾಳಿ, ಪೂರ್ವಾಚಾರಿ ಬಡಿಗೇರ, ಚನ್ನಪ್ಪ ದೇವಗೇರಿ, ಉಡಚಪ್ಪ ಬಾಕಿರ್, ಬಸವರಾಜ ಇಂಗಳಗಿ, ತಮಣ್ಣ ಬಡಿಗೇರ, ಚಿದಂಬರ ಕುಲಕಣಿರ್, ಡಿ. ಯು. ಅಜ್ಜಣ್ಣವರ, ಪ್ರಕಾಶ ಬಾಕಿರ್, ಮಹಾಲಿಂಗಪ್ಪ ಕುಂಬಾರ, ವೀರಯ್ಯ ಸಂಕಿನಮಠ, ಈರಣ್ಣ ಯಲಿಗಾರ ಹಾಗೂ ಇತರರು ಪಾಲ್ಗೊಂಡಿದ್ದರು.