

ಚಾಮರಾಜನಗರ: ಸಂಘ-ಸಂಸ್ಥೆಗಳು ಸಹಕಾರ ನೀಡಿದರೆ ನಗರದ ಎಲ್ಲ ಉದ್ಯಾನಗಳನ್ನೂ ಅಭಿವೃದ್ಧಿಗೆ ಮಾಡಬಹುದು ಎಂದು ನಗರಸಭೆ ಅಧ್ಯಕ್ಷ ಸುರೇಶ್ ತಿಳಿಸಿದರು.
ನಗರದ ಶ್ರೀಚಾಮರಾಜೇಸ್ವರ ದೇವಸ್ಥಾನದ ಮುಂಭಾಗ ಇರುವ ಉದ್ಯಾನದಲ್ಲಿ ಜ್ಞಾನದೀಪ ಟ್ರಸ್ಟ್ ವತಿಯಿಂದ 500 ಸಸಿಗಳ ನೆಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚಾಮರಾಜೇಶ್ವರ ಉದ್ಯಾನದ ಅಭಿವೃದ್ಧಿಗೆ ನಗರಸಭೆಯಿಂದ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಿವಪ್ರಸಾದ್ ಮಾತನಾಡಿ, ಜ್ಞಾನದೀಪ ಟ್ರಸ್ಟ್ ವತಿಯಿಂದ ಸಸಿ ನೆಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಶ್ಲಾಸಿದರು. ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಮತ್ತು ನಗರಸಭೆ ಸದಸ್ಯ ಆರ್.ಪಿ.ನಂಜುಂಡಸ್ವಾಮಿ, ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರು, ವರ್ತಕರ ಸಂಘದ ಅಧ್ಯಕ್ಷ ಶಂಕರ್ ಮಾತನಾಡಿದರು. ನಗರಸಭೆ ಯೋಜನಾಧಿಕಾರಿ ವೆಂಕಟನಾಯಕ, ಪರಿಸರ ವಿಭಾಗದ ಎಇಇ ರೂಪಾ, ಆರೋಗ್ಯ ನಿರೀಕ್ಷಕಿ ಸುಷ್ಮಾ, ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಪಳನಿಸ್ವಾಮಿ, ಸಮಾಜ ಸೇವಕ ಡಾ. ಪರಮೇಶ್ವರಪ್ಪ, ಜ್ಯೋತಿ, ರೂಪ, ನರ್ಗೀಸ್ ಬಾನು,ಟ್ರಸ್ಟ್ ಕಾರ್ಯದರ್ಶಿ ಜಯಲಕ್ಷ್ಮಿ, ಸಂಯೋಜಕ ವೀರಭದ್ರಪ್ಪ, ಶಿಕ್ಷಕರಾದ ಜೆ.ಬಿ.ಮಹೇಶ್, ಸಿಂಧು, ಶೃತಿ ಇದ್ದರು.