ಶ್ರೀಘ್ರದಲ್ಲೇ ಬಸ್​ ನಿಲ್ದಾಣ ಕಾಮಗಾರಿಗೆ ಅಸ್ತು

FotoJet 333
Published on

ಶಾಸಕಿ ರೂಪಕಲಾ ಭರವಸೆ | 5 ಕೋಟಿ ರೂ. ಅನುದಾನದಲ್ಲಿ ಕಾರ್ಯಾರಂಭ

ಕೆಜಿಎಫ್​ : ಬಸ್​ ನಿಲ್ದಾಣಕ್ಕೆ ಹೊಸ ರೂಪ ನೀಡುವ ಸಲುವಾಗಿ ದ್ವಿಚಕ್ರ ವಾಹನಗಳ ಪ್ರವೇಶಕ್ಕೆ ರ್ನಿಬಂಧ ಹೇರಲಾಗಿದ್ದು, ನಿಲ್ದಾಣದಲ್ಲಿ ವಾತಾವರಣ ಬದಲಾವಣೆ ಕಂಡಿರುವುದು ಸಂತಸ ಸಂದಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ವ್ಯಾಪಾರಸ್ಥರಿಗೂ ತೊಂದರೆಯಾಗದಂತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಶಾಸಕಿ ರೂಪಕಲಾ ಹೇಳಿದರು.

ನಗರದ ಹೃದಯ ಭಾಗದಲ್ಲಿರುವ ಕುವೆಂಪು ಬಸ್​ ನಿಲ್ದಾಣದಲ್ಲಿ ನೂತನವಾಗಿ ಅಳವಡಿಸಿರುವ ಹೈಮಾಸ್ಟ್​ ವಿದ್ಯುತ್​ ದೀಪಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದ್ವಿಚಕ್ರ ವಾಹನ ನಿಲ್ದಾಣವನ್ನು ಹೊಸದಾಗಿ ಹುಲ್ಲಿನ ಮಾರುಕಟ್ಟೆಯಲ್ಲಿ ನಿಮೀರ್ಸಲು ಚಿಂತನೆ ನಡೆಸಲಾಗುತ್ತಿದ್ದು, ಸಾರ್ವಜನಿಕರು ವಾಹನಗಳನ್ನು ನಿಲ್ಲಿಸಿಬೇಕಾದ ಮಳಿಗೆಗಳಿಗೆ ತೆರಳಿ ಅಗತ್ಯ ವಸ್ತುಗಳನ್ನು ಖರೀದಿಸಬಹುದು ಎಂದರು.

ಇದೇ ಸಮಯದಲ್ಲಿ ಬಸ್​ ನಿಲ್ದಾಣದಲ್ಲಿನ ದ್ವಿಚಕ್ರ ವಾಹನಗಳಿಗೆ ರ್ನಿಬಂಧ ಹೇರಿರುವುದರಿಂದ ವ್ಯಾಪಾರ ಕುಂಠಿತವಾಗಿದೆ. ಸ್ವಂತ ವಾಹನಗಳನ್ನು ಸಹ ಒಳಗೆ ಬಿಡುತ್ತಿಲ್ಲವಾದ್ದರಿಂದ ಸಮಸ್ಯೆ ಎದುರಾಗಿದೆ ಎಂದು ವ್ಯಾಪಾರಸ್ಥರು ತಮ್ಮ ಅಳಲು ತೋಡಿಕೊಂಡರು.

ಈ ಹಿಂದೆ ಸಾರ್ವಜನಿಕರು ಹಾಗೂ ಗ್ರಾಮಾಂತರ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳು, ರೋಗಿಗಳು, ವಯೋವೃದ್ಧರು, ಮಹಿಳೆಯರು ಬಸ್​ ನಿಲ್ದಾಣದಲ್ಲಿ ಕೂರುವುದಕ್ಕೆ ಮತ್ತು ಬಸ್​ಗಳಿಗಾಗಿ ನಿರೀಸುವುದಕ್ಕೆ ಆರೋಗ್ಯಕರ ವಾತಾವರಣ ಇಲ್ಲದಂತಾಗಿದೆ ಎಂದು ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ನಿಲ್ದಾಣದೊಳಗೆ ದ್ವಿಚಕ್ರ ವಾಹನಗಳಿಗೆ ಕಡಿವಾಣ ಹಾಕಿ ಕಠಿಣ ಕ್ರಮ ಕೈಗೊಂಡಿದ್ದು, ಬಸ್​ ನಿಲ್ದಾಣದ ಅಭಿವೃದ್ಧಿಗೆ <5 ಕೋಟಿ ರೂ. ಅನುದಾನದಲ್ಲಿ ಡಿಪಿಎಆರ್​ ತಯಾರಿ ಮಾಡಲಾಗಿದ್ದು ಶೀಘ್ರ ಬಸ್​ ನಿಲ್ದಾಣದ ರೂಪುರೇಷೆ ಬದಲಿಸಲಾಗುವುದು.ಬಳಕೆಗೆ ಅನರ್ಹವಾಗಿರುವ ಹಳೆಯ ಶೌಚಗೃಹವನ್ನು ಕೆಡವಿ ಅದೇ ಜಾಗದಲ್ಲಿ ನಗರಸಭೆಯಿಂದ ಶೌಚಗೃಹ ನಿರ್ಮಿಸಿ ಸಾರ್ವಜನಿಕ ಬಳಕೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net