ಶ್ರೀಗುರು ಪರದೇಶಪ್ಪ ಮಠದಲ್ಲಿ ಅದ್ದೂರಿ ಜಾತ್ರೆ ಸಂಪನ್ನ

9 ckm 6
ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ಬೊಗಸೆ ಗ್ರಾಮದಲ್ಲಿ ಶ್ರೀ ಗುರು ಪರದೇಶಪ್ಪನವರ ಮಠದಲ್ಲಿ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನೂರಾರು ಭಕ್ತಾಧಿಗಳ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ನೆರವೇರಿತು.
Published on

ಚಿಕ್ಕಮಗಳೂರು: ತಾಲೂಕಿನ ಖಾಂಡ್ಯ ಹೋಬಳಿ ಬೊಗಸೆ ಗ್ರಾಮದಲ್ಲಿ ಶ್ರೀ ಗುರು ಪರದೇಶಪ್ಪನವರ ಮಠದಲ್ಲಿ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನೂರಾರು ಭಕ್ತಾಧಿಗಳ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ನೆರವೇರಿತು.

ಜಾತ್ರೆಯಲ್ಲಿ ಹಲವಾರು ಗ್ರಾಮದಿಂದ ನಾಡು ಬರುವುದು ವಿಶೇಷವಾಗಿತ್ತು. ಗ್ರಾಮಸ್ಥರು ಕುಟುಂಬದವರ ಜೊತೆಗೆ ಪಾಲ್ಗೊಂಡು ರಥವನ್ನು ಎಳೆಯುವುದು, ಕೆಂಚದೇವರ ಮಣೆ ಆಡಿಸುವುದು, ಕೆಂಡ ತುಳಿದು ಆರಾಧ್ಯ ದೈವಕ್ಕೆ ವಿಶೇಷಪೂಜೆ ಸಲ್ಲಿಸಿದರು.

ಈ ಜಾತ್ರೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮಗ ಶಶಿಧರ್ ಹಾಗೂ ಅವರ ತಂಡದವರು, ಕಡವಂತಿ ಗ್ರಾಪಂ ಸದಸ್ಯ ವಿನೋದ್ ಬೊಗಸೆ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net