ಶ್ರೀಗಳೊಂದಿಗೆ ಕಾಶಪ್ಪನವರ ಸಮರಕ್ಕೆ ಇಳಿದಿದ್ದಾರೆ

bkt-20-2 a
Published on

ಬಾಗಲಕೋಟೆ: ಕೂಡಲಸಂಗಮದ ಪೀಠದ ಪ್ರಥಮ ಜಗದ್ಗುರು ಪೀಠ. ಶ್ರೀಗಳು ಪ್ರಥಮ ಜಗದ್ಗುರುಗಳು. ಪೀಠದ ಭೂಮಿಗೆ ಮುರುಗೇಶ ನಿರಾಣಿ ಹಣ ನೀಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಸರ್ಕಾರ ಒಂದು ಕೋಟಿ ರೂ., ಸದಾನಂದ ಗೌಡ ಸರ್ಕಾರ ೫೦ ಲಕ್ಷ ರೂ. ಕೊಟ್ಟಿದ್ದಾರೆ. ಕಾಶಪ್ಪನವರ ಕೊಡುಗೆ ಏನು ಇಲ್ಲ. ಕಿಂಚಿತ್ತು ಸಹಾಯ ಮಾಡಿಲ್ಲ ಎಂದು ಮಾಜಿ ಸಚಿವ, ಶಾಸಕ ಸಿ.ಸಿ.ಪಾಟೀಲ ಹೇಳಿದರು.

ನಗರದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ವಾತಾವರಣ ನೆಮ್ಮದಿಯಾಗಿಲ್ಲ. ಶ್ರೀಗಳು ಹಣಕ್ಕಾಗಿ ಆಸೆ ಪಟ್ಟಿಲ್ಲ. ಭಕ್ತರೇ ಅವರಿಗೆ ಆಸ್ತಿ. ಸಂಚಾರದಲ್ಲಿ ಇದ್ದಾಗ ಭಕ್ತರ ಮನೆಯಲ್ಲಿ ಉಳಿದುಕೊಂಡು ಸಮಾಜಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಆದರೇ ಯಾಕೋ ಗೊತ್ತಿಲ್ಲ. ಸ್ಥಳೀಯ ಶಾಸಕರು(ವಿಜಯಾನಂದ ಕಾಶಪ್ಪನವರ) ಪೀಠದ ಸ್ವಾಮೀಜಿ ಅವರೊಂದಿಗೆ ಸಮರಕ್ಕೆ ಇಳಿದಿದ್ದಾರೆ. ದೀಪ ಆರುವ ಮುನ್ನ ಹೆಚ್ಚು ಹೊತ್ತಿ ಉರಿಯುತ್ತದೆ. ಹಾಗೇ ಪರಿಸ್ಥಿತಿ ತಾವೇ ತಂದು ಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಮಠದಲ್ಲಿ ಕುಳಿತು ಆಚಾರ ವಿಚಾರ ಹೇಳುವ ಸ್ವಾಮೀಜಿ ನೇಮಕ ಮಾಡುತ್ತೇವೆ ಎನ್ನುವ ಕಾಶಪ್ಪನವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿ.ಸಿ.ಪಾಟೀಲ, ಕಾಶಪ್ಪನವರ ಆಚಾರ, ವಿಚಾರ ಎಂತವು ಇದಾವೆ ಎನ್ನುವುದು ಮಾಧ್ಯಮಗಳಿಗೆ ಗೊತ್ತಿಲ್ವ? ವಿನಾಕಾರಣ ಅವರ ಬಗ್ಗೆ (ಕಾಶಪ್ಪನವರ) ಕೇಳಬೇಡಿ. ಹುಚ್ಚರ ರೀತಿ ಕಾಶಪ್ಪನವರ ವಾಪಸ್ ಮಾತಾನಾಡುತ್ತಾರೆ. ನಾನು ಪೀಠ, ಗುರುಗಳ ಬಗ್ಗೆ ಮಾತನಾಡುತ್ತೇನೆ. ಶ್ರೀಗಳು ಮೀಸಲಾತಿ ಬೇಕಾದ ಸಮಾಜಗಳ ಜನರ ಹೃದಯದಲ್ಲಿz್ದÁರೆ.

ಅಖಿಲ ಭಾರತ ಅಧ್ಯಕ್ಷ-ಪಧ್ಯಕ್ಷ ಅವೆಲ್ಲ ಸ್ವಯಂ ಘೋಷಿತ. ಯಾವ ಕಾರಣಕ್ಕೆ ಈ ನಡೆ? ಪಾದಾಯಾತ್ರೆ ಮಾಡಬೇಕಾದರೇ ಶ್ರೀಗಳು ಬೇಕಾದರು. ಪತ್ನಿ ವೀಣಾಗೆ ಲೋಕಸಭಾ ಟಿಕೆಟ್ ಬೇಕಾದಾಗ ಶ್ರೀಗಳು ಬೇಕಾಗಿದ್ದರು. ಈಗ ಬೇಡ ಆಗಿದ್ದಾರಾ? ಎಲ್ಲವನ್ನೂ ಸಮಾಜ ನೋಡುತ್ತಿದೆ. ಅಽಕಾರ ಶಾಶ್ವರ ಅಲ್ಲ, ಅಽಕಾರದಲ್ಲಿ ಇದ್ದವು ಏನೇನು ಆಗಿ ಹೋಗಿದ್ದಾರೆ. ರಾಜ್ಯದ ಜನ, ದೇಶದ ಜನ ನೋಡುತ್ತಿದ್ದಾರೆ. ಅಽಕಾರಕ್ಕಿಂತ ನಮ್ಮ ಧರ್ಮ, ಜಾತಿ ಮುಖ್ಯ. ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಮೇರೆಗೆ ಪಂಚಮಸಾಲಿ ಪೀಠ ಸ್ಥಾಪನೆ ಆಗಿದೆ. ಅದು ಕೂಡಾ ಕೂಡಲಸಂಗಮ ಪವಿತ್ರ ಸ್ಥಳದಲ್ಲಿದೆ. ಅಂತಹ ಸ್ಥಳದಲ್ಲಿದ್ದುಕೊಂಡು ಒತ್ತಡ, ಹಿಂಸೆ ಕೊಡುವುದು ಸರಿಯಲ್ಲ. ಸನ್ಯಾಸಿ ಕಣ್ಣಲ್ಲಿ ನೀರು ತರಿಸಿದ ವ್ಯಕ್ತಿ, ನೆಮ್ಮದಿಯಿಂದ ಬದುಕಿದಂತಹ ಉದಾಹರಣೆ ಇಲ್ಲ ಎಂದು ತಿಳಿಸಿದರು.

ನಾವು ಮನವಿ ಮಾಡಿದರು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಕಾಶಪ್ಪನವರ ಇಲ್ಲ. ಈಗಲೂ ಕಾಶಪ್ಪನವರ ಮನವಿ ಮಾಡುತ್ತೇನೆ. ಅವರ ಮಟ್ಟಕ್ಕೆ ನಾನು ಭಾಷೆ ಬಳಸಲ್ಲ. ನನ್ನಲ್ಲಿ ಆ ಸಂಸ್ಕೃತಿ ಇಲ್ಲ. ನೂನ್ಯತೆ ಇದ್ದರೇ ಸಮಾಜದ ಹಿರಿಯರು ಕೂಡಿ ಬಗೆಹರಿಸಿಕೊಳ್ಳಲಿ ಎಂದು ಕಾಶಪ್ಪನವರ ಅವರಿಗೆ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net