ಶ್ರೀಗಳಿಗೆ ಡಾಕ್ಟರೇಟ್ ಸಂದಿದ್ದು ಸಂತಸ

21Huk1
Published on

ಹುಕ್ಕೇರಿ: ಗಡಿಭಾಗದಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿದ ನಿಡಸೋಸಿಯ ಡಾ.ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಅವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದ್ದು ಸಂತಸದ ಸಂಗತಿ ಎಂದು ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.

ಪಟ್ಟಣದ ನಿಡಸೋಸಿಯ ದುರದುಂಡೇಶ್ವರ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಈಚೆಗೆ ಡಾಕ್ಟರೇಟ್ ಪಡೆದ ಜಗದ್ಗುರು ಡಾ.ಪಂಚಮ ಶಿವಲಿಂಗೇಶ್ವರ ಶ್ರೀಗಳನ್ನು ಬೆಲ್ಲದ ಬಾಗೇವಾಡಿ ಕೃಷಿ ಸೇವಾ ಸಂಘದ ಆಡಳಿತ ಮಂಡಳಿಯೊಂದಿಗೆ ಸನ್ಮಾನಿಸಿ ಮಾತನಾಡಿ, ಧಾರ್ಮಿಕ ಕಾರ್ಯಗಳ ಜತೆಗೆ ಅನ್ನದಾಸೋಹ ಮತ್ತು ಶೈಕ್ಷಣಿಕ ಕ್ರಾಂತಿ ಕೈಗೊಂಡ ಶ್ರೀಗಳ ಕಾರ್ಯಕ್ಕೆ ಈ ಪ್ರಶಸ್ತಿ ದೊರಕಿದೆ ಎಂದರು.

ಡಾ.ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಈ ಗೌರವ ಪುರಸ್ಕಾರ ಮಠದ ಭಕ್ತರಿಗೆ ಸಲ್ಲುತ್ತದೆ ಎಂದರು.

ಬೆಲ್ಲದ ಬಾಗೇವಾಡಿ ಕೃಷಿ ಸೇವಾ ಸಂಘದ ಅಧ್ಯಕ್ಷ ಶ್ರೀಕಾಂತ ಖೇಮಲಾಪುರೆ, ಉಪಾಧ್ಯಕ್ಷ ಅಶೋಕ ಬೆಲ್ಲದ, ನಿರ್ದೇಶಕ ಮುರಗೇಶ ಮಾಳಗಿ, ಬಸವರಾಜ ಲಟ್ಟಿ, ನಾಶೀರ ಜಗದಾಳ, ಸಂಗಪ್ಪ ಎಡತ್ತಿನವರ, ವ್ಯವಸ್ಥಾಪಕ ರವೀಂದ್ರ ಕತ್ತಿ, ಸಹಾಯಕ ವ್ಯವಸ್ಥಾಪಕ ಸಾವಂತ ಮುನ್ನೋಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net