

ಕಲಬುರಗಿ: ನಗರದ ಜಗತ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿನ ಶ್ರೀಗಂಧದ ಮರವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭೀಮನಗರದ ಸಂದೀಪ ಪಿ. ದೂರು ನೀಡಿದ್ದು, ಬೆಳಗ್ಗೆ ವಾಯುವಿಹಾರಕ್ಕೆ ಹೋಗಿದ್ದಾಗ ಮರ ಬಿದ್ದಿತ್ತು. ಸಮೀಪಕ್ಕೆ ಹೋಗಿ ನೋಡಿದ್ದಾಗ ಮಶೀನ್‌ನಿಂದ ಮರವನ್ನು ಕಟ್ ಮಾಡಿಕೊಂಡು ಹೋಗಿರುವುದು ಕಂಡು ಬಂದಿದೆ. ಅಂದಾಜು ಐದು ಸಾವಿರ ರೂ. ಬೆಲೆ ಬಾಳುವ ಶ್ರೀಗಂಧ ಮರವಾಗಿದ್ದು, ಕಳ್ಳರನ್ನು ಪತ್ತೆ ಮಾಡುವಂತೆ ದೂರು ನೀಡಿದ್ದಾರೆ.