ಶ್ರೀಕೃಷ್ಣನ ಜೀವನವೇ ರೋಚಕ ಕಥಾನಕ: ಸವಿತಾ ಕಾಂಬಳೆ

26 Jaggu 10
ಬೆಳಗಾವಿ ಕುಮಾರ ಗಂಧರ್ವ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಮೇಯರ್​ ಸವಿತಾ ಕಾಂಬಳೆ ಉದ್ಘಾಟಿಸಿದರು. ಡಾ.ಗಜಾನನ ನಾಯ್ಕ, ಅಶೋಕ ದುಡಗುಂಟಿ, ವಿದ್ಯಾವತಿ ಭಜಂತ್ರಿ, ಎಸ್​.ಎ.ಮುಂಡೆ, ಡಾ.ಅರವಿಂದ ತೆನಗಿ ಇತರರಿದ್ದರು.
Published on

ಬೆಳಗಾವಿ: ಕೃಷ್ಣನ ಹುಟ್ಟಿನಿಂದ ಅಂತ್ಯದವರೆಗೆ ಅನೇಕ ರೋಚಕ ಕತೆಗಳಿದ್ದು, ಒಂದೊಂದು ಕತೆಯಲ್ಲೂ ಬದುಕಿನ ವಿವಿಧ ರೂಪ ಕಾಣಬಹುದು ಎಂದು ಮಹಾಪೌರೆ ಸವಿತಾ ಕಾಂಬಳೆ ನುಡಿದರು.

ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕಂತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀಕೃಷ್ಣನ ಕತೆಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಅರ್ಜುನನ ಮೂಲಕ ಜಗತ್ತಿಗೆ ನೀಡಿರುವ ಸಂದೇಶವೇ ಭಗವದ್ಗೀತೆ. ಅದು ಸರ್ವಕಾಲಕ್ಕೂ ಪ್ರಸ್ತುತ ಎಂದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಶಾಸಿಯ ಭಾಷಾ ಅಧ್ಯಯನ ಸಂಸ್ಥೆ ಸಹಾಯಕ ಪ್ರಧ್ಯಾಪಕ ಡಾ.ಗಜಾನನ ನಾಯ್ಕ ಮಾತನಾಡಿ, ಕೃಷ್ಣ ಕೇವಲ ಮಹಾನ್​ ಪರಾಕ್ರಮಿ ಮಾತ್ರವಲ್ಲ. ಸಕಲ ಕಲೆ ಕರಗತ ಮಾಡಿಕೊಂಡವನು. ಕೃಷ್ಣ ತನ್ನ ಜೀವನದಲ್ಲಿ ಜನರಿಗೆ ಕೇವಲ ಜ್ಞಾನ ನೀಡಿದ್ದಾನೆ. ಅದು ಕಾಲೇಪಗಳ ಮೂಲಕವಾಗಲಿ ಅಥವಾ ಗೀತಾ ಮೂಲಕವಾಗಲಿ ಜನರು ತಿಳಿದುಕೊಳ್ಳಬಹುದು ಎಂದರು.

ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಕನ್ನಡ ಮತ್ತು ಸಂಸತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಬೆಳಗಾವಿ ಜಿಲ್ಲಾ ಹಣಬರ ಯಾದವ ಸಂ ಅಧ್ಯಕ್ಷ ಎಸ್​.ಎ.ಮುಂಡೆ, ಜೆಎನ್​ಎಂಸಿ ಪ್ರಾದ್ಯಾಪಕ ಡಾ.ಅರವಿಂದ ತೆನಗಿ, ನಗರಸೇವಕ ಬಸವರಾಜ ಮೋದಗೆಕರ, ಶೀತಲ ಗುಂಡೆ, ಜಯಗೌಡ ಪಾಟೀಲ, ರವಿ ಶಾಸಿ, ಶಿವಲಿಂಗ ಪಾಟಿಲ, ಎನ್​.ಎನ್​.ಪಾಟೀಲ ಇತರರಿದ್ದರು.

ಅದಕ್ಕೂ ಮುನ್ನ ನಗರದ ಅಶೋಕ ವೃತ್ತದಲ್ಲಿ ಮೆರವಣಿಗೆಗೆ ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್​ ಚಾಲನೆ ನೀಡಿದರು. ಮೆರವಣಿಗೆಯು ಕುಮಾರ ಗಂಧರ್ವ ಕಲಾ ಮಂದಿರದವರೆಗೆ ಸಾಗಿ ಸಮಾರೋಪಗೊಂಡಿತು. ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳು ಕುಣಿತ, ಕುಂಭಮೇಳ ಸೇರಿ ವಿವಿಧ ಕಲಾ ತಂಡಗಳು ಪಾಲ್ಗೊಂಡಿದ್ದವು. ವಿಧಾನ ಪರಿಷತ್​ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮೃಣಾಲ ಹೆಬ್ಬಾಳ್ಕರ್​, ಸಮಾಜದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net