ಶ್ರೀಕೃಷ್ಣ ಜನ್ಮಾಷ್ಠಮಿ ಸಂಪನ್ನ

Sreekrishna
Published on

ಚಿತ್ರದುರ್ಗ: ಕಾಟಮ್ಮ ಪಟೇಲ್ ವೀರನಾಗಪ್ಪ ಸಮುದಾಯ ಭವನದಲ್ಲಿ ಎರಡು ದಿನಗಳ ಕಾಲ ಶ್ರದ್ಧಾ, ಭಕ್ತಿ, ಸಂಭ್ರಮದಿಂದ ನಡೆದ ಶ್ರೀಕೃಷ್ಣ ಜನ್ಮಾಷ್ಠಮಿ ಶುಕ್ರವಾರ ಸಂಪನ್ನಗೊಂಡಿತು.

ಅಂತರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ, ಚಿತ್ರದುರ್ಗ ಇಸ್ಕಾನ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ, ರಾಧೆ, ರುಕ್ಮಿಣಿ ವಿಗ್ರಹಗಳಿಗೆ ತೊಟ್ಟಿಲು ಸೇವೆ, ತುಳಸಿ, ಅರ್ಚನೆ ಸೇರಿ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.

ನಂದೋತ್ಸವ, ಶ್ರೀ ಪ್ರಭುಪಾದರ ಅವಿರ್ಭಾವ ಮಹೋತ್ಸವ ಜರುಗಿತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸ್ವಾಮಿಯ ಲೀಲೆಗಳ ಕುರಿತ ಕೀರ್ತನೆಗಳನ್ನು ಭಕ್ತರು ಹಾಡಿದರು. ಭಗವದ್ಗೀತೆ ಪ್ರವಚನದ ನಂತರ ಮಹಾಮಂಗಳಾರತಿ ನೆರವೇರಿತು.

ಶ್ರೀಕೃಷ್ಣ, ರಾಧೆ, ರುಕ್ಮಿಣಿ ವೇಷಧರಿಸಿ ಮಕ್ಕಳ ಗಮನ ಸೆಳೆದರು. ನೃತ್ಯ ಪ್ರದರ್ಶಿಸಿ ಸಡಗರದಲ್ಲಿ ತೇಲಾಡಿದರು. ಇಸ್ಕಾನ್ ಭಕ್ತರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಧುರ ಗೌರಂಗದಾಸ್ ಶ್ರೀಕೃಷ್ಣ ಲೀಲೆ ಕುರಿತು ಪ್ರವಚನ ನೀಡಿದರು. ನೆರೆದಿದ್ದ ಭಕ್ತರಿಗೆ ಮಹಾ ಪ್ರಸಾದ ವಿತರಿಸಲಾಯಿತು.

ಗುರುವಾರ ಸಂಜೆ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉದ್ಘಾಟಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net