ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

krishna 2
Published on

ಬೀದರ್: ನಗರ ಸೇರಿ ಜಿಲ್ಲೆಯ ವಿವಿಧೆಡೆ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಭಕ್ತಿ, ಶ್ರದ್ಧೆಯೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು. ಶಾಲೆಗಳಲ್ಲಿ ಈ ನಿಮಿತ್ತ ನಡೆದ ವಿಶೇಷ ಕಾರ್ಯಕ್ರಮಗಳು ಗಮನ ಸೆಳೆದವು.
ಎಲ್ಲೆಡೆ ಶ್ರೀಕೃಷ್ಣನ ತೊಟ್ಟಿಲೋತ್ಸವ ನಡೆಯಿತು. ಕೃಷ್ಣನಿಗೆ ಅಂಟು, ಕೊಬ್ಬರಿ, ಸಕ್ಕರೆ, ಶುಂಠಿ ಮಿಶ್ರಣದ ಪ್ರಸಾದದಿಂದ ನೈವೇದ್ಯ ಅರ್ಪಿಸಲಾಯಿತು. ಕೃಷ್ಣನ ಲೀಲೆಗಳ ಬಗ್ಗೆ ಉಪನ್ಯಾಸ ನಡೆದು ಬಾಲಲೀಲೆ ಮೇಲೆ ಬೆಳಕು ಚೆಲ್ಲಲಾಯಿತು. ಕೃಷ್ಣನಿಗೆ ಬೆಣ್ಣೆ ಎಂದರೆ ಪಂಚಪ್ರಾಣ. ಹೀಗಾಗಿ ಕೆಲವೆಡೆ ಗಡಿಗೆಯಲ್ಲಿ ಬೆಣ್ಣೆಯಿಟ್ಟು ಕೃಷ್ಣ ವೇಷಧಾರಿ ಪುಟಾಣಿಗಳಿಗೆ ತಿನಿಸಿ ಸಂಭ್ರಮಿಸಲಾಯಿತು.
ನಗರದ ಕೆಪಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಕೃಷ್ಣ ಜನ್ಮಾಷ್ಟಮಿ ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆ ಅಧ್ಯಕ್ಷ ಬಾಬು ವಾಲಿ ಮಾತನಾಡಿದರು. ಕೃಷ್ಣ-ರಾಧಾ ವೇಷಧಾರಿ ಮಕ್ಕಳು ಗಮನ ಸೆಳೆದರು. ಪ್ರೌಢ ಶಾಲೆ ಮುಖ್ಯಗುರು ವಿಜಯಕುಮಾರ ಪಾಟೀಲ್ ಮತ್ತು ಶಿಕ್ಷಕರು, ಮಕ್ಕಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net