ಶ್ರೀ ಹಳವೀರಮ್ಮ ಭಕ್ತಿಗೀತೆಯ ವೀಡಿಯೋ ಲೋಕಾರ್ಪಣೆ

song rlease
ಕೆಂಪನಹಳ್ಳಿಯ ಕಲ್ಕಟ್ಟೆ ಪುಸ್ತಕದ ಮನೆಯಲ್ಲಿಇತ್ತೀಚೆಗೆ ನಡೆದಕಾರ್ಯಕ್ರಮದಲ್ಲಿಕಳಸಾಪುರದ ಶ್ರೀ ಹಳವೀರಮ್ಮ ಭಕ್ತಿಗೀತೆಯ ವೀಡಿಯೋ ಲೋಕಾರ್ಪಣೆ
Published on

ಚಿಕ್ಕಮಗಳೂರು: ಒಂದು ವರ್ಷದಅವಧಿಯಲ್ಲಿ ಚಿಕ್ಕಮಗಳೂರಿನ ವಿವಿಧ ೩೮ ದೇವಾಲಯಗಳ ಕುರಿತು ಭಕ್ತಿಗೀತೆಗಳನ್ನು ಹೊರತರುವುದೆಂದರೆ ಸಾಮಾನ್ಯ ಸಂಗತಿಯಲ್ಲ. ಕಲ್ಕಟ್ಟೆ ಗಾನ ದೀವಿಗೆ ಸರಣಿಯು ನಿಜಕ್ಕೂ ಆಸ್ತಿಕರ ಪಾಲಿಗೆ ನಾದ ಲೋಕವನ್ನು ಸೃಷ್ಟಿಸಿದೆ ಎಂದು ಹಿರೇಗೌಜದ ಶಿಕ್ಷಕಿ ಲತಾಜೆ.ರಮೇಶ್ ತಿಳಿಸಿದರು.

ನಗರದ ಕೆಂಪನಹಳ್ಳಿಯ ಕಲ್ಕಟ್ಟೆ ಪುಸ್ತಕದ ಮನೆಯಲ್ಲಿಇತ್ತೀಚೆಗೆ ನಡೆದಕಾರ್ಯಕ್ರಮದಲ್ಲಿಕಳಸಾಪುರದ ಶ್ರೀ ಹಳವೀರಮ್ಮ ಭಕ್ತಿಗೀತೆಯ ವೀಡಿಯೋ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಹಿಂದೆದಾಸರು ಕೀರ್ತನೆಗಳ ಮೂಲಕ ಸಾಹಿತ್ಯ ಚಳುವಳಿ ಮಾಡಿದ್ದರುಎಂದು ತಿಳಿದಿದ್ದೇವೆ. ಈಗ ನಾಗರಾಜರಾವ್‌ಕಲ್ಕಟ್ಟೆಯವರ ಹೆಜ್ಜೆಯೂ ಭಕ್ತಿಗೀತೆಗಳ ಮೂಲಕ ಸಾತ್ವಿಕ ಚಳುವಳಿಯ ಹಾದಿಯಲ್ಲೇ ಸಾಗಿದೆ. ಅವರಿಗೆಜೊತೆ ನೀಡುತ್ತಿರುವಕೆ.ಎನ್.ನಾಗಭೂಷಣ್ ಮತ್ತುರೇಖಾನಾಗರಾಜರಾವ್‌ಎಲ್ಲರೂಅಭಿನಂದನೀಯರುಎAದುಅವರು ತಿಳಿಸಿದರು.

ತೊಗರಿ ಹಂಕಲ್‌ನ ಶಿಕ್ಷಕಿ ಸುನೀತಾರೊನಾಲ್ಡ್ಮಾತನಾಡಿ, ಕಳಸಾಪುರದ ಶ್ರೀ ಹಳವೀರಮ್ಮ ಹಾಡನ್ನು ಕೇಳುವಾಗ ನಿಜಕ್ಕೂಜಾನಪದ ಸೊಗಡಿನ ವಿಶೇಷ ಅನುಭವವೇ ಮನದಲ್ಲಾಗುತ್ತದೆ. ಚಿಕ್ಕಮ್ಮ, ಕುಂಟಮ್ಮ, ಭೂತಪ್ಪ, ಮಾಸ್ತಮ್ಮಇವರೆಲ್ಲಜನಪದರ ದೇವರುಗಳು. ಒಳ್ಳೆಯ ಜೀವನವೇಜನರನ್ನುದೇವರನ್ನಾಗಿಸುತ್ತದೆಎಂದರು.

ನಿರ್ಮಾಪಕಿರೇಖಾನಾಗರಾಜರಾವ್ ಮಾತನಾಡಿ, ಭಕ್ತಿ ಸೇವೆಯ ಈ ಕೈಂಕರ್ಯದಲ್ಲಿ ನಮಗೆ ಸಂಪೂರ್ಣ ಸಹಕಾರ ನೀಡುತ್ತಿರುವಧ್ವನಿ ಗ್ರಾಹಕ, ಹಿನ್ನೆಲೆ ಸಂಗೀತಗಾರಕೆ.ಎನ್.ನಾಗಭೂಷಣ್ ನಿಜಕ್ಕೂ ಸಂಗೀತ ಶ್ರದ್ಧೆಯಕಲಾವಿದರು. ಅವರ ಬೆಂಬಲವೇ ಈ ಸರಣಿಯ ಯಶಸ್ಸಿನ ಮೂಲ. ಉಳಿದ ಎಲ್ಲಗಾಯಕರಕೊಡುಗೆಯೂಅಪಾರಎಂದರು.

ಕೆಂಪನ ಹಳ್ಳಿ ಮಕ್ಕಳ ಬಳಗದ ಕೇದಾರ್, ಸ್ಕಂದ, ಸಿದ್ವಿಕ್ ಉಪಸ್ಥಿತರಿದ್ದರು. ನಾಗರಾಜರಾವ್‌ಕಲ್ಕಟ್ಟೆ ಸ್ವಾಗತಿಸಿ, ನಿರೂಪಿಸಿದರು. ಚಿಕ್ಕಮಗಳೂರು ತಾಲ್ಲೂಕು ಲೇಖಕಿಯರ ಸಂಘದಅಧ್ಯಕ್ಷೆ ವೈಷ್ಣವಿ ಎನ್.ರಾವ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net