ಶ್ರೀ ಸಿದ್ಧರಾಮೇಶ್ವರರ ಜಯಂತಿ ಆಚರಣೆ

CTD SIDDARAMESHAVRA -MURUGAMATA----
Published on

ಚಿತ್ರದುರ್ಗ:ನಮ್ಮ ನಡೆ-ನುಡಿ ಪರಿಶುದ್ಧವಾಗಿರಬೇಕೆಂದು ಕಾಯಕಯೋಗಿ,ಶೂನ್ಯಪೀಠದ ತೃತೀಯಾಧ್ಯಕ್ಷರಾದ ಶ್ರೀ ಸಿದ್ಧ ರಾಮೇಶ್ವರರು ಪ್ರತಿಪಾದಿಸಿದ್ದಾರೆ ಎಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು. ಮುರುಘಾ ಮಠದ ಮುರುಗಿಯ ಶಾಂತಿವೀರ ಮುರುಘರಾಜೇಂದ್ರ ಸ್ವಾಮೀಜಿ ಲೀಲಾವಿಶ್ರಾಂತಿ ತಾಣದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿ ಸಾನ್ನಿಧ್ಯ ವಹಿಸಿ ಮಾತನಾಡಿ,ಸಿದ್ಧರಾಮೇಶ್ವರರು, ದೇವರನ್ನು ಅರಸಿ ಹೋದ ಬಗೆ,ಅವರಿಗಾದ ಅನುಭವ,ಮಾರ್ಗದರ್ಶನ,ಅವರ ಅನೇಕ ಜನೋಪಯೋಗಿ ಕಾರ‌್ಯಗಳು ಹಾಗೂ ಸಿದ್ಧಿಯೊಂದಿಗೆ ಶೂನ್ಯ ಪೀಠದ ತೃತೀಯಾಧ್ಯಕ್ಷರಾದ ಬಗೆಯನ್ನು ವಿವರಿಸಿದರು.

ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗುರುಮಠಕಲ್ ಖಾಸಮಠದ ಶ್ರೀ ಶಾಂತವೀರ ಗು ರು ಮುರುಘರಾಜೇಂದ್ರ ಸ್ವಾಮೀಜಿ,ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್,ಬೃಹನ್ಮಠ ಪ್ರೌಢಶಾಲೆ ಮುಖ್ಯಶಿಕ್ಷಕಿ ಆಶಾ ರಾಣಿ,ಕೆಇಬಿ ಷಣ್ಮುಖಪ್ಪ,ಗಂಗಾಧರ್,ಸುನೀತಾ, ಜ್ಯೋತಿ, ನವೀನ್‌ಮಸ್ಕಲ್, ಕೆ.ಎಂ.ರಮೇಶ್, ಪಿ.ರಮೇಶ್ ಮತ್ತಿತರರು ಇದ್ದರು. ವಿದ್ಯಾರ್ಥಿಗಳಿಂದ ಸಾಮೂಹಿಕ ಭಜನೆ,ವಚನ ಪ್ರಾರ್ಥನೆ ನಡೆಯಿತು. ಶಿಕ್ಷಕ ನಾಗಾನಾಯ್ಕ ಸ್ವಾಗತಿಸಿ,ಸಿ.ಬಿ.ಸಿದ್ದೇಶ್ ನಿರೂಪಿಸಿದರು. ಎಚ್.ಸಿ.ಮಹೇಶ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net