ಶ್ರೀ ಸಿದ್ಧರಾಮೇಶ್ವರ ರಥೋತ್ಸವ 21ರಂದು

DVG-BHOVI-PEETA-06.jpg
Published on

ದಾವಣಗೆರೆ: ನಗರದ ವೆಂಕಾಭೋವಿ ಕಾಲನಿಯಲ್ಲಿ ಆ. 21ರಂದು ಶ್ರೀ ಸಿದ್ಧರಾಮೇಶ್ವರ ರಥೋತ್ಸವ ಹಾಗೂ ಲಿಂ. ಸಿದ್ಧರಾಮೇಶ್ವರ ಸ್ವಾಮೀಜಿ ಅವರ ಸಂಸ್ಮರಣೋತ್ಸವ ಜರುಗಲಿದೆ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.

ವೆಂಕಾಭೋವಿ ಕಾಲನಿಯ ಶ್ರೀ ಸಿದ್ಧರಾಮೇಶ್ವರ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಸಿದ್ಧರಾಮೇಶ್ವರ ರಥೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂದು ಬೆಳಗ್ಗೆ 10 ಗಂಟೆಗೆ ನಾಡಿನ ವಿವಿಧ ಮಠಾಧೀಶರ ನೇತೃತ್ವದಲ್ಲಿ ಮಂಗಳ ವಾದ್ಯ, ಜಾನಪದ ಕಲಾಮೇಳ ಹಾಗೂ ಪೂರ್ಣಕುಂಭ ಮತ್ತು ಕಳಸಗಳೊಂದಿಗೆ ನಗರದ ಪ್ರಮುಖ ರಾಜ ಬೀದಿಗಳಲ್ಲಿ ರಥೋತ್ಸವ, ಲಿಂ. ಶ್ರೀಗಳು ಮತ್ತು ಶರಣರ ಭಾವಚಿತ್ರಗಳ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು. ಆ.13ರಂದು ಬೆಳಗ್ಗೆ 8ಗಂಟೆಗೆ ಧರ್ಮ ಧ್ವಜಾರೋಹಣ, ಆ.16ರಿಂದ 21ರ ವರೆಗೆ ನಿತ್ಯ ಬೆಳಗಿನಜಾವ ವಚನ ಭಜನೆ, ಆ.19ರಂದು ಬೆಳಗ್ಗೆ 9 ಗಂಟೆಗೆ ಶ್ರೀ ಸಿದ್ಧರಾಮೇಶ್ವರ ವಚನಾಭಿಷೇಕ, ಸಂಜೆ 7 ಗಂಟೆಗೆ ಶ್ರೀ ಸಿದ್ಧರಾಮೇಶ್ವರ ಜೀವನ ದರ್ಶನ ಪ್ರವಚನ, ಆ.20ರಂದು ರಾತ್ರಿ 10ರಿಂದ ಮುಂಜಾನೆ 5 ಗಂಟೆವರೆಗೆ ಮಹಾವಚನ ಭಜನೆ ಹಾಗೂ ಆ.21ರಂದು ಮಹಾ ದಾಸೋಹ ಕಾರ್ಯಕ್ರಮ ನಡೆಯಲಿವೆ ಎಂದು ವಿವರಿಸಿದರು. ಸಮಾಜದ ಮುಖಂಡರಾದ ಎಚ್. ಜಯಣ್ಣ, ವಕೀಲ ಗೋಪಾಲ್, ನಾಗರಾಜ, ಗಣೇಶ, ಶ್ರೀನಿವಾಸ, ಮಂಜುನಾಥ, ಹನುಮಂತ, ಶೇಖರಪ್ಪ, ಕುಮಾರ, ನಲ್ಲಿ ಮಂಜು, ಹರಿಹರ ವಿಜಯಕುಮಾರ, ಹೊನ್ನಾಳಿ ದಿನೇಶ, ಹರಪನಹಳ್ಳಿ ಗುರುಸಿದ್ದಪ್ಪ ಇತರರು ಸಭೆಯಲ್ಲಿದ್ದರು. ----
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net