

ವಿಜಯಪುರ: ಶ್ರೀಹಲಗಣೀಶ ಪ್ರಕಾಶನದ ಹೆಮ್ಮೆಯ ಪ್ರಕಟಣೆ ಶ್ರೀಸಾಕ್ಷಿ ಪಂಚಾಂಗದ ದಶಮಾನೋತ್ಸವವನ್ನು ಇದೇ ದಿನಾಂಕ 27 ರಂದು ಬೆಳಗ್ಗೆ 10 ಕ್ಕೆ ಇಲ್ಲಿನ ಪಿಡಿಜೆ ಹೈಸ್ಕೂಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕಳೆದ ಹತ್ತು ವರ್ಷಗಳಿಂದ ಶ್ರೀಸಾಕ್ಷಿ ಪಂಚಾಂಗವನ್ನು ಪ್ರಕಟಿಸುತ್ತಿರುವ ಹಲಗಣೀಶ ಪ್ರಕಾಶನದ ವತಿಯಿಂದ ಕಳೆದ ಎರಡು ವರ್ಷಗಳಿಂದ ಶ್ರೀಭಾಸ್ಕರಾಚಾರ್ಯ ಕ್ಯಾಲೆಂಡರ್ ಪ್ರಕಟಣೆ 50 ಸಾವಿರ ಪ್ರತಿಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಂಚಾಂಗಕರ್ತ ವಿದ್ವಾನ್ ಗುರುರಾಜ ಆಚಾರ್ಯ ಹೆರಕಲ್ಲ ಹಾಗೂ ಹಿರಿಯ ಪತ್ರಕರ್ತ ಗೋಪಾಲ ನಾಯಕ ತಿಳಿಸಿದ್ರು. ಶ್ರೀಸಾಕ್ಷಿ ಪಂಚಾಂಗದ ದಶಮಾನೋತ್ಸವ ಕಾರ್ಯಕ್ರಮದ ಮೊಕಾಶಿ, ಪಂ. ಭೀಮಾಚಾರ್ಯ ಗೋಣಿ, ಕನ್ನೂರು ಆಶ್ರಮದ ಶ್ರೀಕೃಷ್ಣ ಸಂಪಗಾಂವಕರ ವಹಿಸಲಿದ್ದಾರೆ ಎಂದರು. ಪಿಡಿಜೆ ಹೈಸ್ಕೂಲ್ ಚೇರಮನ್ ಶ್ರೀಕೃಷ್ಣ ಜಿ. ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದು, ಜಲಸಂಪನ್ಮೂಲ ಸಚಿವ ಗೊವಿಂದ ಕಾರಜೋಳ ಉದ್ಘಾಟನೆ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಯಶವಂತ್ರಾಯಗೌಡ ಪಾಟೀಲ, ದೇವಾನಂದ ಚವ್ಹಾಣ, ಖ್ಯಾತ ಚಲನಚಿತ್ರ ನಿರ್ದೇಶಕ ಹಾಗೂ ಸಾಹಿತಿ ಪಲ್ಲಕ್ಕಿ ರಾಧಾಕೃಷ್ಣ, ಚಲನಚಿತ್ರ ನಟ ನವನೀತಾ, ಜಗ್‌ಬಾಸ್ ಹಾಗೂ ರಾಜಾರಾಣಿ ರಿಯಾಲಿಟಿ ಶೋ ಖ್ಯಾತಿಯ ಹುಬ್ಬಳ್ಳಿಯ ಸಮೀರಾಚಾರ್ಯ ಮಣ್ಣೂರ, ಹೊಟೆಲ್ ಉದ್ಯಮಿ ಬಾಬುಗೌಡ ಬಿರಾದಾರ, ಧಾರವಾಡ ಬಿಗ್ ಮಿಶ್ರಾ ಪೇಡಾದ ಮಾಲೀಕರಾದ ಸಂಜಯ ಮಿಶ್ರಾ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಹೇಳದರು. ಪತ್ರಿಕಾಗೋಷ್ಠಿಯಲ್ಲಿ ಚಾಣಕ್ಯ ಕರಿಯರ್ ಅಕಾಡೆಮಿಯ ಎನ್. ಎಂ. ಬಿರಾದಾರ, ಗೋವಿಂದ ದೇಶಪಾಂಡೆ, ಗಿರೀಶ ನವಲಗುಂದ, ಪ್ರೇಮ ಮೊದಲಾದವರು ಉಪಸ್ಥಿತರಿದ್ದರು.