

ನುಗ್ಗೇಹಳ್ಳಿ: ಇತಿಹಾಸ ಪ್ರಸಿದ್ಧ ಶ್ರೀ ಸಾಂಬ ಸದಾಶಿವಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ವಿಜೃಂಭಣೆಯಿಂದ ನೆರವೇರಿತು.
ಭಾನುವಾರ ರಾತ್ರಿ ಕುದುರೆ ಉತ್ಸವ, ಕಲ್ಯಾಣೋತ್ಸವ, ಸೋಮವಾರ ಬೆಳಗ್ಗೆ ಕೃಷ್ಣಗಂಧೋತ್ಸವ, ಪಡಿಸೇವೆ, ರಥಕ್ಕೆ ಮಹಾ ನೈವೇದ್ಯ, ಹೂವಿನ ಅಲಂಕಾರದೊಂದಿಗೆ ಅಭಿಜಿನ್ ಮುಹೂರ್ತದಲ್ಲಿ ರಥೋತ್ಸವ ನೆರವೇರಿತು. ನುಗ್ಗೇಹಳ್ಳಿ ಸುತ್ತಲಿನ ವಿರುಪಾಕ್ಷಿಪುರ, ಲಕ್ಷ್ಮೀಪುರ, ಹೊನ್ನಮರನಹಳ್ಳಿ, ಮುದ್ದೇನಹಳ್ಳಿ, ಹೂವಿನಳ್ಳಿ, ಜಂಬೂರು, ಬಸವನಪುರ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.
ಭಕ್ತರಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು. ನುಗ್ಗೆಹಳ್ಳಿಪುರ ವರ್ಗ ಹಿರೇಮಠದ ಶ್ರೀ ಮಹೇಶ್ವರ ಸ್ವಾಮೀಜಿ, ಶಾಸಕ ಸಿ.ಎನ್. ಬಾಲಕೃಷ್ಣ, ಅರ್ಚಕರಾದ ರಘು ದೀಕ್ಷಿತ್, ರಘು ಶರ್ಮ ಮುದ್ರೆ, ಉದ್ಯಮಿ ಜಗದೀಶ್, ವಾಣಿಜ್ಯ ತೆರಿಗೆ ಪರಿವೀಕ್ಷಕ ಎನ್.ಎಸ್.ಪ್ರಸನ್ನ, ಕಂದಾಯ ನಿರೀಕ್ಷಕ ಲೋಕೇಶ್, ನಾಗರಿಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್, ಗ್ರಾಪಂ ಸದಸ್ಯರಾದ ರಮ್ಯಾ ಲೋಕೇಶ್, ಹೊನ್ನೇಗೌಡ, ಎನ್.ಆರ್.ನಟರಾಜ್, ಮಂಜುನಾಥ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಆರ್.ದೊರೆಸ್ವಾಮಿ, ಸದಸ್ಯ ಎಚ್.ಪಿ.ಸಂಪತ್ ಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.