ಶ್ರೀ ಸಬ್ಬಮ್ಮದೇವರ ಸುಗ್ಗಿ ಉತ್ಸವ ಮುಕ್ತಾಯ

18spt3 (1)
ಸೋಮವಾರಪೇಟೆ ಸಮೀಪದ ಕುಮಾರಳ್ಳಿ ಗ್ರಾಮದ ಶ್ರೀ ಸಬ್ಬಮ್ಮದೇವಿಯ ಸುಗ್ಗಿ ಉತ್ಸವದಲ್ಲಿ ಸಬ್ಬಮ್ಮ ತಾಯಿಯ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು.
Published on

ಸೋಮವಾರಪೇಟೆ: ಎಂಟು ಗ್ರಾಮಗಳು ಒಟ್ಟಿಗೆ ಸೇರಿ ಪ್ರತಿವರ್ಷ ಆಚರಿಸುವ ಕುಮಾರಳ್ಳಿ ಶ್ರೀ ಸಬ್ಬಮ್ಮದೇವರ ಸುಗ್ಗಿ ಸೋಮವಾರ ರಾತ್ರಿ ಮುಕ್ತಾಯಗೊಂಡಿತು.

ಪ್ರಕೃತಿಯನ್ನು ಅರಾಧಿಸುವ ಸಾಂಪ್ರದಾಯಿಕ ಪೂಜೆಗಳು ಶನಿವಾರದಿಂದ ಸುಗ್ಗಿಕಟ್ಟೆಯಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿದವು. ದೀಪ ಬೆಳಗುವುದು, ಕೋಲು ಹೊಡೆಯುವುದು, ದೀಪ ತೂಗುವುದು, ಕೆಂಡ ಹಾಯುವುದು, ಬಿಲ್ಲು ಹೊಡೆಯುವುದು, ಕೋಲಾಟ, ಹಲ್ಲು ಸುತ್ತಿಕೊಂಡು ನೃತ್ಯ ಇತ್ಯಾದಿ ಗ್ರಾಮೀಣ ಆಚರಣೆಗಳು ನಡೆದವು.

ಸೋಮವಾರ ರಾತ್ರಿ ಕುಮಾರಳ್ಳಿ, ಹಂಚಿನಳ್ಳಿ, ಬೀದಳ್ಳಿ, ಹೆಗ್ಗಡಮನೆ, ಬೀದಳ್ಳಿ, ಮಲ್ಲಳ್ಳಿ, ಮಾಲ್‌ಮನೆ, ಕೋಡಳ್ಳಿ, ಬಾಚಳ್ಳಿ ಗ್ರಾಮಸ್ಥರು ಗ್ರಾಮದ ಸುಭಿಕ್ಷೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಅನ್ನದಾನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net