ಶ್ರೀ ಶಿವಾನಂದ ಶಿವಾಚಾರ್ಯರ ಕಲ್ಯಾಣ ಮಂಟಪ ಉದ್ಘಾಟನೆ

Kalyan Mantap
Published on

ಬೀದರ್: ಕೆಲವೇ ನಿಮಿಷಗಳ ಕಾಲ ದೇವರ ಧ್ಯಾನ ಮಾಡಿದರೂ ನಮ್ಮಲ್ಲಿನ ಕ್ರೋಧ, ಮತ್ಸರಗಳು ದೂರವಾಗಿ ನೆಮ್ಮದಿ ದೊರೆಯುತ್ತದೆ. ಇನ್ನು ನಿತ್ಯವೂ ಧ್ಯಾನವನ್ನು ಅಭ್ಯಾಸ ಮಾಡಿಕೊಂಡರೆ ನೆಮ್ಮದಿಯ ಬದುಕು ನಮ್ಮದಾಗಲು ಸಾಧ್ಯ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ, ಡಾ.ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.
ಇಲ್ಲಿನ ಮಾಧವನಗರದ ಶ್ರೀ ಕ್ಷೇತ್ರ ಮುಕ್ತಿಧಾಮ ಮಠದಲ್ಲಿ ಇತ್ತೀಚೆಗೆ ಶ್ರೀ ಶಿವಾನಂದ ಶಿವಾಚಾರ್ಯರ ಕಲ್ಯಾಣ ಮಂಟಪ ಉದ್ಘಾಟಿಸಿ ಮಾತನಾಡಿ, ಗೊಂದಲಗಳಿಂದ ದೂರವಾಗಿ ಜೀವನದಲ್ಲಿ ಮನಃಶಾಂತಿಯನ್ನು ಬಯಸುವವರು ಧ್ಯಾನದ ಮೊರೆ ಹೋಗುವುದೇ ಉತ್ತಮ ಮಾರ್ಗ ಎಂದು ತಿಳಿಸಿದರು.
ನಾಗಮಾರಪಳ್ಳಿ ಫೌಂಡೇಷನ್ ಮೂಲಕ ಸಮಾಜಮುಖಿ ಕೆಲಸ ಮಾಡಲಾಗುತ್ತಿದೆ. ಕರೊನಾ ವೇಳೆ ಕೆಲಸ ಕಳೆದುಕೊಂಡ ಸಾವಿರಾರು ಪರಿವಾರಗಳಿಗೆ ಆಹಾರ ಕಿಟ್, ಮಾಸ್ಕ್ ವಿತರಣೆ ಮಾಡಲಾಗಿದೆ. ಬೇಸಿಗೆ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಕುಡಿವ ನೀರಿನ ಸಮಸ್ಯೆಯಾಗಿದೆ. ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿದರು.
ಶ್ರೀ ಶಿವಾನಂದ ಶಿವಾಚಾರ್ಯ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಶಿವಶರಣಪ್ಪ ವಾಲಿ, ಷಣ್ಮುಖಯ್ಯ ಸ್ವಾಮಿ, ಬಾಬುರಾವ ಪಸಗರ್ೆ, ಚನ್ನಬಸಯ್ಯ ಸ್ವಾಮಿ, ವಿಠಲ್ ರಡ್ಡಿ, ಮಂಜುನಾಥ ಬಿರಾದಾರ್, ಶಾಂತಲಿಂಗ ಸಾವಳಗಿ, ಉದಯಕುಮಾರ ಜವಳೆ, ಶಿವಕುಮಾರ ಬಿರಾದಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net