ಶ್ರೀ ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ

Shivakumaraswamiji (FILEminimizer)
Published on

ಮೈಸೂರು: ಶ್ರೀ ಶಿವಕುಮಾರ ಸ್ವಾಮೀಜಿ ಅವರ 6ನೇ ವರ್ಷದ ಪುಣ್ಯಸ್ಮರಣೆ, ದಾಸೋಹ ದಿವಸ ಕಾರ್ಯಕ್ರಮ ನಗರದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.

ಶ್ರೀ ಶಿವಕುಮಾರ ಸ್ವಾಮೀಜಿ ಭಕ್ತ ಮಂಡಳಿಯ ವತಿಯಿಂದ ಅಗ್ರಹಾರದ 101 ಗಣಪತಿ ದೇವಸ್ಥಾನದಿಂದ ಹೊರಟ ಮೆರವಣಿಗೆ ಕಾರ್ಯಕ್ರಮಕ್ಕೆ ಮೆರುಗು ತಂದಿತು.

ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ಗುರುಮಲ್ಲೇಶ್ವರ ಸ್ವಾಮೀಜಿ, ಶ್ರೀ ಬಸವೇಶ್ವರ ಸ್ವಾಮೀಜಿ, ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ, ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಭಾವಚಿತ್ರ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿತು.

ನಂದಿಕಂಬ, ವೀರಗಾಸೆ, ಪೂಜಾಕುಣಿತ, ಪಟ್ಟದ ಕುಣಿತ, ಭಜನೆ, ವಾದ್ಯಗೋಷ್ಠಿ, ಕಂಭಮೇಳ ಆಕರ್ಷಿಸಿದವು.

ಅಗ್ರಹಾರ ವೃತ್ತದ ತ್ಯಾಗರಾಜ ರಸ್ತೆ, ಚಾಮರಾಜ ಜೋಡಿರಸ್ತೆಯ ಮೂಲಕ ಜೆಎಸ್‌ಎಸ್ ವಿದ್ಯಾಪೀಠ ಬಸವ ಪ್ರತಿಮೆ ಮೂಲಕ ರಾಮಾನುಜ ರಸ್ತೆ, ಕುದೇರು ಮಠದ ಬಸವೇಶ್ವರ ರಸ್ತೆ ಮುಖಾಂತರ ಪುನಾ ನೂರೊಂದು ಗಣಪತಿ ದೇವಸ್ಥಾನಕ್ಕೆ ಮೆರವಣಿಗೆ ವಾಪಸಾಯಿತು. ನಂತರ ಪ್ರಸಾದ ವಿನಿಯೋಗ ಮಾಡಲಾಯಿತು. ಮುಖಂಡರಾದ ಎಸ್.ಚಿಕ್ಕಹಳ್ಳಿಸ್ವಾಮಿ, ಗಿರೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net