ಶ್ರೀ ಶಾರದೆ ದರ್ಶನ ಪಡೆದ ಜಮ್ಮುಕಾಶ್ಮೀರ ಲೆ.ಗವರ್ನರ್

sri lt visit
ಶೃಂಗೇರಿ ಶ್ರೀ ಶಾರದಾಪೀಠಕ್ಕೆ ಜಮ್ಮುಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಭೇಟಿ ನೀಡಿದರು.
Published on

ಶೃಂಗೇರಿ: ಶೃಂಗೇರಿ ಶ್ರೀ ಶಾರದಾಪೀಠಕ್ಕೆ ಜಮ್ಮುಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಶುಕ್ರವಾರ ಭೇಟಿ ನೀಡಿದರು.

ಅವರನ್ನು ಮಠದ ಆಡಳಿತಾಧಿಕಾರಿ ಪಿ.ಎ.ಮುರಳಿ ಹಾಗೂ ಅಧಿಕಾರಿಗಳು ಗೌರವಪೂರ್ವಕವಾಗಿ ಸ್ವಾಗತಿಸಿದರು. ಶ್ರೀ ಜಗನ್ಮಾತೆ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಮನೋಜ್ ಸಿನ್ಹಾ ಭಾಗಿಯಾದರು. ಬಳಿಕ ನರಸಿಂಹವನದ ಗುರುನಿವಾಸದಲ್ಲಿ ಜಗದ್ಗುರುಗಳನ್ನು ಭೇಟಿ ಮಾಡಿ ಅನುಗ್ರಹ ಪಡೆದರು. ಲೆಫ್ಟಿನೆಂಟ್ ಗವರ್ನರ್ ಮಂಗಳೂರಿನಿಂದ ಆಗಮಿಸಿದ ಹಿನ್ನೆಲೆಯಲ್ಲಿ ಮಾರ್ಗದಲ್ಲಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು. ಎಸ್.ಕೆ.ಬಾರ್ಡರ್, ಕೆರೆಕಟ್ಟೆ, ನೆಮ್ಮಾರ್, ತ್ಯಾವಣ, ಕಿಗ್ಗಾ ಸರ್ಕಲ್, ಶ್ರೀಮಠದ ಎದುರು ಸೇರಿದಂತೆ ಆಯಕಟ್ಟಿನಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net