ಶ್ರೀ ಶಾರದಾ ಸಹಸ್ರನಾಮ ಸೇವೆ

sri bjp
ಶೃಂಗೇರಿ ಧನ್ವಂತರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಉಮೇಶ್ ತಲಗಾರು ಉದ್ಘಾಟಿಸಿದರು. ಸುಜಾತಾ, ಶ್ರೇಯಸ್ಸು, ಕುಮಾರ್, ಶ್ರೀವಿದ್ಯಾ ಇತರರಿದ್ದರು.
Published on

ಶೃಂಗೇರಿ: ಬಿಜೆಪಿ ಮಂಡಲದಿಂದ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಧನ್ವಂತರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಬಿಜೆಪಿ ಮಂಡಲದ ಅಧ್ಯಕ್ಷ ಉಮೇಶ್ ತಲಗಾರು ಮಾತನಾಡಿ, ಬಡ ಕುಟುಂಬದ ನೋವು-ನಲಿವುಗಳನ್ನು ಕಂಡ ಮೋದಿ ಅವರು ಸಮಾಜದ ಕಟ್ಟಕಡೆಯ ಜನರಿಗೂ ಮೂಲ ಸೌಕರ್ಯಗಳನ್ನು ನೀಡಿದ ಮಾನವತಾವಾದಿ. ಅವರ ರಾಷ್ಟ್ರಪ್ರೇಮ, ಪರಿಶ್ರಮ ಮಾದರಿ ಎಂದರು. 40ಕ್ಕೂ ಹೆಚ್ಚು ಕಾರ್ಯಕರ್ತರು ರಕ್ತದಾನ ಮಾಡಿದರು. ಅಭಿಮಾನಿಗಳು ಮೋದಿ ಹೆಸರಿನಲ್ಲಿ ಶ್ರೀ ಶಾರದಾ ಸಹಸ್ರನಾಮ ಸೇವೆ ಸಲ್ಲಿಸಿದರು. ಡಾ. ಲಕ್ಷ್ಮೀನಾರಾಯಣ್, ಎಚ್.ಎಸ್.ವೇಣುಗೋಪಾಲ್, ನೂತನ್‌ಕುಮಾರ್, ಬಿ.ಶಿವಶಂಕರ್, ನಾಗರಾಜ್, ಶ್ರೀಧರ್ ಅಣ್ಣುಕೊಡಿಗೆ, ಶ್ರೇಯಸ್ಸು, ರಾಘವೇಂದ್ರ ಹಂಚಲಿ, ಪ್ರವೀಣ್, ಶ್ರೀವಿದ್ಯಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net