ಶ್ರೀ ಶಾಂತೇಶ್ವರ ಪ್ರೌಢಶಾಲೆಗೆ ಸ್ವಾತಿ ಟಾಪರ್

1 Swati Harobelavadi
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀ ಶಾಂತೇಶ್ವರ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಶೇ. 81.71 ಆಗಿದೆ. 175ರಲ್ಲಿ 143 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಸ್ವಾತಿ ಹಾರೋಬೆಳವಡಿ ಶೇ. 93.44 ಅಂಕ ಸಂಪಾದಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ರಕ್ಷಿತಾ ಚವ್ಹಾಣ ಶೇ. 92.80 ದ್ವಿತೀಯ, ಶಿಲ್ಪಾ ಹೊಂಬಳ ಶೇ. 92.48 ಮತ್ತು ರಕ್ಷಿತಾ ಧನಶೆಟ್ಟಿ ಶೇ. 92.48 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಅನಿತಾ ಬೆಳದಡಿ ಶೇ. 92, ನಿಖಿತಾ ಶಿಂಧೆ ಶೇ. 91.34, ಗಂಗಾಧರ ಬಂಡಿವಾಡ ಶೇ. 90.88, ಅಂಜಲಿ ತಳವಾರ ಶೇ. 90.72, ಗೂಳಪ್ಪ ಕಡ್ಲೆಪ್ಪನವರ ಶೇ. 90.40 ಹಾಗೂ ಪ್ರೀತಿ ಹುಲಗೂರ ಶೇ. 90.24 ಅಂಕ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net