

ಶ್ರೀರಂಗಪಟ್ಟಣ: ತಾಲೂಕಿನ ಕೂಡಲಕುಪ್ಪೆ ಗ್ರಾಮದ ಶ್ರೀ ಶಕ್ತಿ ಶನೈಶ್ಚರ ದೇಗುಲದಲ್ಲಿ ಶ್ರಾವಣ ಮಾಸದ 3ನೇ ಶನಿವಾರದ ಪ್ರಯುಕ್ತ ಶನಿದೇವರ ಬ್ರಹ್ಮರಥೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ಗ್ರಾಮದ ಶ್ರೀ ಶನೈಶ್ಚರ ದೇಗುಲದಲ್ಲಿ ದೇವರ ಗುಡ್ಡಪ್ಪ ಗೌತಮ್ ನೇತೃತ್ವದಲ್ಲಿ ಶ್ರೀ ಶನಿ ದೇವರಿಗೆ ಮುಂಜಾನೆಯಿಂದ ಮಡಿಪೂಜೆ, ಪಂಚಾಮೃತ ಅಭಿಷೇಕ, ಬೆಣ್ಣೆ ಅಭಿಷೇಕ, ಪುಷ್ಪ ಅಲಂಕಾರ, ವಿಶೇಷ ಪೂಜಾ ಕೈಂಕರ್ಯ ಸೇರಿದಂತೆ ವಿವಿಧ ಪೂಜಾ ಕಾರ್ಯಗಳೊಂದಿಗೆ ಸೂರ್ಯದೇವ ಹಾಗೂ ಮಾತೆ ಛಾಯಾದೇವಿಗೆ ಕಲ್ಯಾಣೋತ್ಸವ ನೆರವೇರಿಸಲಾಯಿತು.
ಶ್ರೀ ಶನೈಶ್ಚರಸ್ವಾಮಿ ದೇವಾಲಯದಲ್ಲಿನ ವಿಶೇಷ ಪೂಜೆಗಳ ಸಲ್ಲಿಕೆಗಾಗಿ ವಿವಿಧ ತಾಲೂಕು ಸೇರಿದಂತೆ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರ ರಥವವನ್ನು ಭಕ್ತಿಯಿಂದ ಎಳೆದು ಬ್ರಹ್ಮ ರಥೋತ್ಸವವನ್ನು ಸಂಪನ್ನಗೊಳಿಸಿದರು. ಈ ವೇಳೆ ಭಕ್ತರು ತೇರಿಗೆ ಹಣ್ಣು-ಕಾಯಿಯೊಂದಿಗೆ ಪೂಜೆ ಸಲ್ಲಿಸಿ, ಹಣ್ಣು-ಧವನ ಎಸೆದು ಪುನೀತರಾದರು. ಭಾವ ವ್ಯಕ್ತಪಡಿಸಿದರು.
ಬಳಿಕ ದೇವಾಲಯದ ಆವರಣದಲ್ಲಿ ಸುಮಾರು 4 ಸಾವಿರಕ್ಕೂ ಅಕ ಭಕ್ತಾದಿಗಳಿಗೆ ದೇಗುಲದ ವತಿಯಿಂದ ಅನ್ನಸಂಪರ್ಪಣೆ ನೆರವೇರಿಸಲಾಯಿತು.
ಈ ವೇಳೆ ಗ್ರಾಮದ ಯಜಮಾನರು, ಮುಖಂಡರು ಸೇರಿದಂತೆ ಯುವಕರು ಹಾಗೂ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತ ಸಮೂಹ ಹಾಜರಿದ್ದರು.