ಶ್ರೀ ಶಂಕರರ ಏಕತಾಮೂರ್ತಿ ಲೋಕಾರ್ಪಣೆ ಸಮಾರಂಭಕ್ಕೆ ಮಾದಾರ ಶ್ರೀ

CTD 15 SRI MADARA SRI--08
Published on


ಚಿತ್ರದುರ್ಗ: ಭೂಪಾಲ್ನ ನರ್ಮದಾ ನದಿ ದಂಡೆ ಮೇಲೆ ನಿರ್ಮಿಸಿರುವ ಶ್ರೀ ಶಂಕರಾಚಾರ್ಯರ 106 ಅಡಿ ಎತ್ತರದ ಏಕತಾಮೂರ್ತಿಯ ಲೋಕಾರ್ಪಣೆ ಸಮಾರಂಭ ಸೆ.18ರಂದು ಅಲ್ಲಿ ಜರುಗಲಿದೆ. ಈ ಸಮಾರಂಭಕ್ಕೆ ಚಿತ್ರದುರ್ಗದ ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರು ಪೀಠದ ಶ್ರೀ ಬಸವ ಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರನ್ನು ಮಧ್ಯಪ್ರದೇಶ ಸರ್ಕಾರ ಆಹ್ವಾನಿಸಿದೆ.
ಶಂಕರಾಚಾರ್ಯರು,ಸಂಚರಿಸಿದ್ದ,ಧ್ಯಾನ ನಿರತರಾಗಿದ್ದ ನರ್ಮದಾ ನದಿಯ ದಂಡೆ ಮೇಲೆ ಮಧ್ಯಪ್ರದೇಶ ಸರ್ಕಾರ ಏಕತಾಮೂರ್ತಿ ನಿರ್ಮಿ ಸಿದೆ. ಇದರ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸುವಂತೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಅವರು, ಮಾದಾರ ಶ್ರೀಗಳನ್ನು ಅಧಿಕೃತವಾಗಿ ಆಹ್ವಾನಿಸಿದ್ದಾರೆ.
ಈ ಸಂದರ್ಭದಲ್ಲಿ ಅದ್ವೈತ ಕೇಂದ್ರದ ಭೂಮಿ ಪೂಜಾ ಕಾರ‌್ಯಕ್ರಮವೂ ನೆರವೇರಲಿದೆ. ಈ ಎರಡೂ ಕಾರ‌್ಯಕ್ರಮಗಳಲ್ಲಿ ಶ್ರೀಗಳು ಭಾಗವಹಿ ಸಲಿ ದ್ದಾರೆ. ಅದ್ವೈತ ಮತದ ಸ್ಥಾಪಕ ಶ್ರೀ ಶಂಕರಾಚಾರ್ಯರು ಮನಕುಲದ ಸಮಾನತೆಗೆ ಶ್ರಮಿಸಿದ್ದರು. ಅವರ ತತ್ವ,ಸಿದ್ಧಾಂತಗಳು ಮುಂದಿನ ಪೀಳಿ ಗೆಗೆ ಪ್ರಚುರ ಪಡಿಸಲು ಮಧ್ಯಪ್ರದೇಶ ಸರ್ಕಾರ ಮುಂದಾಗಿದೆ ಎಂದು ಶ್ರೀ ಶಿವಶರಣ ಮಾದರ ಚೆನ್ನಯ್ಯ ಗುರುಪೀಠದ ವ್ಯವಸ್ಥಾಪಕ ಬಿ. ಹರೀಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net